ಜಿಲ್ಲಾ ಸುದ್ದಿಬಾಗಲಕೋಟೆಮನರಂಜನೆಸಿನಿಮಾಸೆಲೆಬ್ರಿಟಿ

ನಟ ಪುನೀತ್ ರಾಜಕುಮಾರ್ ಸಮಾಧಿಗೆ ಭೇಟಿ ನೀಡಲು ಸೈಕಲ್ ನಲ್ಲಿ ಹೊರಟ ಅಭಿಮಾನಿ

ಬಾಗಲಕೋಟೆ: ಇತ್ತೀಚಿಗೆ ನಮ್ಮನ್ನೆಲ್ಲ ಅಗಲಿದ ಪುನೀತ್ ರಾಜಕುಮಾರ್ ಸಮಾಧಿಗೆ ಭೇಟಿ ನೀಡಲು ಬಾಗಲಕೋಟೆ ಅಭಿಮಾನಿಯೊಬ್ಬ ಸೈಕಲ್ ಮೇಲೆ ಸವಾರಿ ಬೆಳಸಿದ್ದಾನೆ. ಅಪ್ಪು ಸಮಾಧಿ ಭೇಟಿ ನೀಡಿ ಶ್ರದ್ದಾಂಜಲಿ ಸಲ್ಲಿಸಲು ಅಭಿಮಾನಿ ಮುಂದಾಗಿದ್ದು, ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದಾನೆ.

ಮೂಲತಃ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದ ರಾಘವೇಂದ್ರ ಗಾಣಿಗೇರ್ ಎಂಬಾತ ಯುವರತ್ನ ಪುನೀತ್ ಅಭಿಮಾನಿಯಾಗಿದ್ದು, ನಿನ್ನೆ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದಿಂದ ಸೈಕಲ್ ಯಾತ್ರೆ ಆರಂಭಿಸಿದ್ದಾನೆ, ನಿನ್ನೆ ರಾತ್ರಿ ಹುನಗುಂದ ತಲುಪಿ, ಅಲ್ಲಿ ವಾಸ್ತವ್ಯ ಹೂಡಿದ್ದನು. ಇಂದು ಬೆಳಗ್ಗೆ ಹುನಗುಂದ ಪಟ್ಟಣದಿಂದ ಸೈಕಲ್ ಯಾತ್ರೆ ಆರಂಭಿಸಿದ್ದಾನೆ ರಾಘವೇಂದ್ರ, ಹುನಗುಂದ ತಲುಪುತ್ತಿದ್ದಂತೆ, ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಅಪ್ಪು ಅಭಿಮಾನಿಗಳು ರಾಘವೇಂದ್ರಗೆ ಸನ್ಮಾನ ಮಾಡಿ ಕಳುಹಿಸಿಕೊಟ್ಟಿದ್ದಾರೆ.

ಬಾದರದಿನ್ನಿ ಗ್ರಾಮದಿಂದ ಬೆಂಗಳೂರುವರೆಗೆ 600 ಕಿಮೀ ಸೈಕಲ್ ಯಾತ್ರೆ ಮಾಡಲು ನಿರ್ಧರಿಸಿರುವ ರಾಘವೇಂದ್ರ, ಕನ್ನಡಧ್ವಜ, ಸೈಕಲ್‌ಹಿಂದೆ ಮುಂದೆ ಅಪ್ಪು ಭಾವಚಿತ್ರ ಕಟ್ಟಿಕೊಂಡು ಸೈಕಲ್ ಯಾತ್ರೆ ಹೊರಟಿದ್ದಾನೆ, ಅಪ್ಪು ಸಮಾಧಿಗೆ ತೆರಳಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿ ವಾಪಸ್ ಆಗಲಿದ್ದಾನೆ. ಅಪ್ಪು ಮೃತಪಟ್ಟ ದಿನವೇ ‌ಹೋಗಬೇಕೆಂದುಕೊಂಡದ್ದನು, ಆದರೆ ಆರೋಗ್ಯ ಸರಿ ಇಲ್ಲದ ಕಾರಣ ಈಗ ಸೈಕಲ್ ಯಾತ್ರೆ ಹೊರಟಿರುವದಾಗಿ ಹೇಳಿದ್ದಾನೆ.

ಹುನಗುಂದ, ಇಳಕಲ್, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿನ ಅಪ್ಪು ಸಮಾಧಿವರೆಗೆ ರಾಘವೇಂದ್ರ ಸೈಕಲ್ ಯಾತ್ರೆ ನಡೆಯಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button