ಮದುವೆಯ ಬಗ್ಗೆ ಮೌನ ಮುರಿದ ರಶ್ಮಿಕಾ ಮಂದಣ್ಣ

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ನಿತ್ಯ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗ್ತಾನೆ ಇರ್ತಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ರಶ್ಮಿಕಾ ಸಿನಿಮಾ ರಂಗದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ರಶ್ಮಿಕಾ ಯಾವಾಗ ಮದುವೆಯಾಗ್ತಾರೆ, ಯಾರನ್ನ ವರಸ್ತಾರೆ ಅನ್ನೊ ಪ್ರಶ್ನೆಯನ್ನ ಅಭಿಮಾನಿಗಳು ಆಗಾಗ ಕೇಳ್ತಾನೆ ಇರ್ತಾರೆ. ಇದೆಲ್ಲದಕ್ಕೂ ರಶ್ಮಿಕಾ ಈಗ ಉತ್ತರ ನೀಡಿದ್ದಾರೆ.
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತೆರೆಕಂಡ ಪುಷ್ಪ ಸಿನಿಮಾದ ಬಳಿಕ ರಶ್ಮಿಕಾ ಮಂದಣ್ಣ ಮಾರ್ಕೆಟ್ ಹೆಚ್ಚಾಗಿದ್ದು ಪರಭಾಷೆಯಿಂದ ಹೆಚ್ಚು ಹೆಚ್ಚು ಆಫರ್ಗಳು ಬರ್ತಿವೆ. ಈ ಮಧ್ಯೆ ರಶ್ಮಿಕಾರ ಮದುವೆ ಯಾವಾಗ ಅನ್ನೊ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
2017ರ ಜುಲೈ 3ರಂದು ನಟ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ರಶ್ಮಿಕಾ ಅಷ್ಟೇ ಬೇಗ ಆ ಸಂಬಂಧಕ್ಕೆ ಗುಡ್ ಬಾಯ್ ಹೇಳಿದ್ರು. ಆ ಬಳಿಕ ರಶ್ಮಿಕಾ ಹೆಸರು ನಟ ವಿಜಯ್ ದೇವರಕೊಂಡ ಜೊತೆ ಕೇಳಿ ಬರೋಕೆ ಶುರುವಾಗಿತ್ತು. ಅದಕ್ಕೆ ಪೂರಕವೆಂಬಂತೆ ರಶ್ಮಿಕಾ ಸಾಕಷ್ಟು ಬಾರಿ ವಿಜಯ್ ದೇವರಕೊಂಡ ಜೊತೆ ಪಬ್ಲಿಕ್ ಆಗಿಯೇ ಕಾಣಿಸಿಕೊಂಡಿದ್ರು. ಜೊತೆಗೆ ವಿಜಯ್ ಶೂಟಿಂಗ್ ಸೆಟ್ಗೂ ಭೇಟಿ ನೀಡಿ ಕುತೂಹಲ ಹೆಚ್ಚಿಸಿದ್ರು. ಆದ್ರೆ ಈ ಜೋಡಿಗಳು ಮಾತ್ರ ಯಾವಾತ್ತು ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ಹೀಗಾರಿ ರಶ್ಮಿಕಾರ ಮದುವೆಯ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ.
“ನನ್ನ ಪ್ರಕಾರ ಲವ್ ಎಂದರೆ ಪರಸ್ಪರ ಸಮಯ, ಗೌರವ ನೀಡುವುದು. ಒಬ್ಬರ ಜೊತೆ ಸುರಕ್ಷಿತ ಭಾವ ಮೂಡುವುದೇ ಲವ್. ಪ್ರೀತಿ ಎಂಬುದು ಸಂಪೂರ್ಣ ಭಾವನೆಗಳಿಗೆ ಸಂಬಂಧಿಸಿದ ವಿಷಯ. ಹೀಗಾಗಿ ಅದನ್ನ ವಿವರಿಸುವುದು ಕಷ್ಟ. ಎರಡೂ ಕಡೆಯಿಂದಲೂ ಪ್ರೀತಿ ಸರಿಯಾಗಿದ್ದಾಗ ಅದು ಫಲಿಸುತ್ತದೆ. ಕೇವಲ ಒಬ್ಬರ ಕಡೆಯಿಂದ ಅದು ಸಾಧ್ಯವಿಲ್ಲ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
ಮದುವೆ ಆಗಲು ನಾನಿನ್ನೂ ತುಂಬ ಚಿಕ್ಕವಳು. ಮದುವೆ ಬಗ್ಗೆ ನಾನು ನಿರ್ಧಾರ ಮಾಡಿಲ್ಲ ಎಂದಿರುವ ರಶ್ಮಿಕಾ ನಿಮಗೆ ಕಂಫರ್ಟಬಲ್ ಎನಿಸುವವರ ಜೊತೆ ನೀವು ಇರಬೇಕು ಎಂದು ಸಲಹೆಯನ್ನೂ ನೀಡಿದ್ದಾರೆ. ಸದ್ಯ ರಶ್ಮಿಕಾ ಕೈಯಲ್ಲಿ ಹಲವು ಸಿನಿಮಾಗಳಿದ್ದು ತೆಲುಗಿನ ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾ ಫೆ.25ರಂದು ರಿಲೀಸ್ ಆಗಲಿದೆ. ಜೊತೆಗೆ ಹಿಂದಿಯ ‘ಮಿಷನ್ ಮಜ್ನು’ ಹಾಗೂ ‘ಗುಡ್ ಬೈ’ ಸಿನಿಮಾಗಳು ತೆರೆಗೆ ಬರಲು ಸಿದ್ದವಾಗಿದೆ.




