ಸ್ಮಾಲ್ ಸ್ಕ್ರೀನ್ನಲ್ಲಿ ಕಮಾಲ್ ಮಾಡಲಿರೋ ರಾಮ್ಕುಮಾರ್, ಶ್ರುತಿ

ಸ್ಯಾಂಡಲ್ವುಡ್ ಚಿತ್ರರಂಗದ ಒಂದು ಕಾಲದ ಸೂಪರ್ ಹಿಟ್ ಜೋಡಿಗಳು ಅಂದ್ರೆ ಅದು ರಾಮ್ ಕುಮಾರ್ ಹಾಗೂ ನಟಿ ಶೃತಿ. ಥಿಯೇಟರ್ನಲ್ಲಿ ಪ್ರೇಕ್ಷಕರ ಕಣ್ಣಲ್ಲಿ ಕಣ್ಣೀರಿನ ಕೋಡಿಯನ್ನೇ ಹರಿಸಿದ್ದ ಈ ಜೋಡಿಗಳು ಸಾಕಷ್ಟು ವರ್ಷಗಳ ಬಳಿಕ ಮತ್ತೆ ಒಂದಾಗ್ತಿದ್ದಾರೆ. ಆದ್ರೆ ಅದು ಬಿಗ್ ಸ್ಕ್ರೀನ್ನಲ್ಲಿ ಅಲ್ಲ ಬದಲಾಗಿ ಸ್ಮಾಲ್ ಸ್ಕ್ರೀನ್ನಲ್ಲಿ.
ಇತ್ತೀಚೆಗೆ ಬಿಗ್ಸ್ಕ್ರೀನ್ನಲ್ಲಿ ಹೆಸ್ರು ಮಾಡಿದವ್ರು ಸ್ಮಾಲ್ಸ್ಕ್ರೀನ್ಗೆ ಎಂಟ್ರಿಕೊಡ್ತಿದ್ದಾರೆ. ಈಗಾಗ್ಲೆ ಖ್ಯಾತ ನಟಿ ಊಮಾಶ್ರೀ ಸ್ಮಾಲ್ ಸ್ಕ್ರೀನ್ನಲ್ಲಿ ಸಖತ್ ಸದ್ದು ಮಾಡ್ತಿದ್ದ ಇದ್ರ ಮಧ್ಯೆ ರಾಮ್ಕುಮಾರ್ ಹಾಗೂ ನಟಿ ಶ್ರುತಿ ಕೂಡ ಧಾರವಾಹಿಗಳ ಮೂಲಕ ಪ್ರೇಕ್ಷಕರ ಮನೆ ಮನಗಳನ್ನ ತಲುಪೋಕೆ ರೆಡಿಯಾಗಿದ್ದಾರೆ.
ಈಗಾಗ್ಲೆ ಸುಮಾರು 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮೋಡಿ ಮಾಡಿದ್ದ ಜೋಡಿಯನ್ನ ಮತ್ತೆ ತೆರೆ ಮೇಲೆ ನೋಡ್ಬೇಕು ಅನ್ನೋ ಆಸೆ ಅಭಿಮಾನಿಗಳದ್ದು. ಅಭಿಮಾನಿಗಳ ನಾಡಿ ಮಿಡಿತ ಅರ್ಥ ಮಾಡಿಕೊಂಡ ನಿರ್ಮಾಪಕ ಸುಬ್ಬು ಈ ಜೋಡಿಯನ್ನ ಮತ್ತೆ ಟಿವಿ ಪರದೆ ಮುಂದೆ ಕರೆ ತರಲಿದ್ದಾರೆ. ಮರಾಠಿಯ ಖ್ಯಾತ ಧಾರವಾಹಿ ಅಗ್ಗಬಾಯ್ ಸುನ್ಬಾಯ್ ಕನ್ನಡಕ್ಕೆ ರಿಮೇಕ್ ಆಗ್ತಿದ್ದ ಈ ಧಾರವಾಹಿಯ ಪ್ರಮುಖ ಪಾತ್ರದಲ್ಲಿ ರಾಮ್ಕುಮಾರ್ ಹಾಗೂ ಶ್ರುತಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗ್ಲೆ ಈ ಜೋಡಿಗಳು ಧಾರವಾಹಿಯಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ರಾಧಾ ರಮಣ ಖ್ಯಾತಿಯ ಸುಬ್ಬು ಎಂಬುವವರು ಈ ಧಾರವಾಹಿಯನ್ನ ನಿರ್ಮಾಣ ಮಾಡ್ತಿದ್ದು ಮೂಲಗಳ ಪ್ರಕಾರ ಈ ಧಾರವಾಹಿ ಝೀ ಕನ್ನಡದಲ್ಲಿ ಪ್ರಸಾರವಾಗಲಿದೆಯಂತೆ.



