Latestಮನರಂಜನೆಸಿನಿಮಾ

ಸ್ಯಾಂಡಲ್ ವುಡ್ ಗೆ ಮತ್ತೆ ಮರಳಿದ ಪ್ರಭುದೇವ; ಯಾವ ಸಿನಿಮಾ ಗೊತ್ತಾ?

ಭಾರತದ ಮೈಕಲ್ ಜಾಕ್ಸನ್ ಅಂದರೆ ಪ್ರಭುದೇವ ಎಂದು ಎಲ್ಲರಿಗೂ ಗೊತ್ತೇ ಇದೆ. ಅವರು ಡ್ಯಾನ್ಸ್ ನಿಂದಲೆ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಪ್ರಭುದೇವ ಡ್ಯಾನ್ಸ್ ನೋಡುತ್ತ ಇದ್ದರೆ, ಅದೆಷ್ಟೋ ಜನ ಮೈಮರೆತು ಹೋಗಿರುತ್ತಾರೆ. ಈಗಾಗಲೇ ಉಪೇಂದ್ರ ಅಭಿನಯದ ಹೆಚ್ 2 ಓ ಸಿನಿಮಾದ ಮೂಲಕ ಪ್ರಭುದೇವ ಕನ್ನಡದಲ್ಲಿ ಅಭಿನಯಿಸಿದ್ದರು. ನಂತರ ಅವರು ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಇದೀಗ ಮತ್ತೊಂದು ಸಿನಿಮಾಕ್ಕೆ ಪ್ರಭುದೇವ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಹೌದು ಪ್ರಭುದೇವ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಮರಳುತ್ತಿದ್ದಾರೆ. ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಬರಲು ಸಿದ್ದವಾಗಿದೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ಸಂದೇಶ್ ನಾಗರಾಜ್ ಈ ಚಿತ್ರಕ್ಕೆ ನಿರ್ಮಾಣ ಮಾಡುತ್ತಿದ್ದಾರೆ.

ಅಂದಹಾಗೆ ಈ ಚಿತ್ರದ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಶೀಘ್ರದಲ್ಲೇ ಈ ಚಿತ್ರದ ತಾರಾಬಳಗ ‌ಹಾಗೂ ತಾಂತ್ರಿಕವರ್ಗದ ಕುರಿತು ಚಿತ್ರತಂಡ ಮಾಹಿತಿ ನೀಡಲಿದ್ದಾರೆ. ಈಗ ಪ್ರಭುದೇವ ಮತ್ತೆ ಕನ್ನಡಕ್ಕೆ ಬಂದಿರುವುದಕ್ಕೆ ಅಭಿಮಾನಿಗಳಿಗೆ ಖುಷಿ ಆಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button