Breaking NewsLatestಜಿಲ್ಲಾ ಸುದ್ದಿರಾಜಕೀಯಹುಬ್ಬಳ್ಳಿ - ಧಾರವಾಡ

ಪಕ್ಷಾಂತರ ಪರ್ವಕ್ಕೆ ಇನ್ನೂ ಒಂದು ವರ್ಷ ಸಮಯವಿದೆ: ಸತೀಶ್ ಜಾರಕಿಹೊಳಿ

ಹುಬ್ಬಳ್ಳಿ : ನಮ್ಮ ಪಕ್ಷಕ್ಕೆ ಬರುವವರು ಬರುವಾಗ ಬರುತ್ತಾರೆ. ಇನ್ನೂ ರಾಜ್ಯದಲ್ಲಿ ಪಕ್ಷಾಂತರ ಪರ್ವ ಪ್ರಾರಂಭವಾಗಿಲ್ಲ, ಅದಕ್ಕೆ ಕಡಿಮೆ‌ ಅಂದರು ಒಂದು ವರ್ಷ ಬೇಕಾಗುತ್ತದೆ. ಈಗಲೇ ಯಾರು ಬರುತ್ತಾರೆ ಎಂಬುವುದನ್ನು ಹೇಳುವುದಕ್ಕೆ ಕಷ್ಟವಾಗುತ್ತದೆ ಎಂದು ಕೆಪಿಸಿಸಿ‌ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಇದರ ಬಗ್ಗೆ ನಮ್ಮ ಹಲವು‌ ನಾಯಕರು ಹೇಳಿಕೆಗಳನ್ನು ನೀಡಿದ್ದಾರೆ. ಪಕ್ಷಾಂತರ ಪರ್ವ ಕಾಣಿಸಿಕೊಳ್ಳಬೇಕಾದರೆ, ಅದಕ್ಕೆ ಅದರದೆಯಾದ ಸಮಯ ತೆಗೆದುಕೊಳ್ಳುತ್ತದೆ. ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಯಾರು ಬರುತ್ತಾರೆ ಎನ್ನುವುದನ್ನು ಖಚಿತವಾಗಿ ಈಗಲೇ ಹೇಳುವುದಕ್ಕೆ ಬರುವುದಿಲ್ಲ ಎಂದರು.

ಹುಜಾಬ್ ಗಲಾಟೆ ಎರಡ್ಮೂರು ದಿನ ಮಾತ್ರ ಇರುತ್ತದೆ. ಆಮೇಲೆ ಅದೂ ತಣ್ಣಗಾಗುವ ವಿಶ್ವಾಸವಿದೆ. ಮಕ್ಕಳ ಶಿಕ್ಷಣದ ಮೇಲೆ ಹಿಜಾಬ್‌ ಪರಿಣಾಮ ಬೀರಬಾರದು.‌ ಮಕ್ಕಳು ಇದರ ಬಗ್ಗೆ ಹೆಚ್ಚು ಗಮನ ಹರಿಸಬಾರದು, ಅವರು ಕಲಿಯುವ ವಯಸ್ಸಾಗಿದೆ. ಹಾಗಾಗಿ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳುವ ಕಡೆ ಗಮನ ಹರಿಸಬೇಕು.‌ ಇಂತಹ ವಿವಾದಗಳನ್ನು ನೋಡಿಕೊಳ್ಳಲು ಕಾನೂನು, ಸರ್ಕಾರ ಹಾಗೂ ಆಡಳಿತ ಮಂಡಳಿಗಳು ಇರುತ್ತವೆ.‌ಅವರು ಅದನ್ನು ನೋಡಿಕೊಳ್ಳುತ್ತಾರೆ. ರಾಜ್ಯ ಸರ್ಕಾರ‌ ಜೊತೆಗೆ ಆಡಳಿತ ಮಂಡಳಿಗಳು ಹೆಚ್ಚು ಇದರ ಬಗ್ಗೆ ನಿಗಾವಹಿಸಿ, ಹಿಜಾಬ್ ವಿವಾದವನ್ನು ನಿಯಂತ್ರಿಸಬೇಕು ಎಂದು ಒತ್ತಾಯ ಮಾಡಿದರು. ‌

ಸಿಎಂ ಇಬ್ರಾಹಿಂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ನಂಬಿಕೆ ಇದೆ:

ಪ್ರಸ್ತುತ ಸಿಎಂ ಇಬ್ರಾಹಿಂ ಅವರು ನಮ್ಮ ಪಕ್ಷವನ್ನು ಅಧಿಕೃತವಾಗಿ ಬಿಟ್ಟು ಹೋಗಿಲ್ಲ, ಸದ್ಯ ಅವರು ನಮ್ಮ ಪಕ್ಷದಲ್ಲಿಯೇ ಇದ್ದಾರೆ. ಮುಂದೆಯೂ ಅವರು ನಮ್ಮ ಪಕ್ಷದಲ್ಲಿ ಇರುತ್ತಾರೆ ಎಂಬ ನಂಬಿಕೆ ಇದೆ. ನಮ್ಮ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು, ಇಬ್ರಾಹಿಂ ಅವರ ಜೊತೆ ಮಾತನಾಡುತ್ತೇನೆ ಅಂದಿದ್ದಾರೆ. ಅವರ ಹಂತದಲ್ಲಿ ಮಾತಾಡಿ ಸಮಸ್ಯೆ ಪರಿಹಾರ ಮಾಡುವ ವಿಶ್ವಾಸವಿದೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button