ಕ್ರಿಕೆಟ್ಕ್ರೀಡೆಮನರಂಜನೆಸಿನಿಮಾಸೆಲೆಬ್ರಿಟಿ

ಮಹೇಂದ್ರ ಸಿಂಗ್ ಧೋನಿಯನ್ನು ಭೇಟಿಯದ ಕಾಲಿವುಡ್ ಸ್ಟಾರ್ ನಟ ವಿಜಯ್

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಕಾಲಿವುಡ್ ಸ್ಟಾರ್ ನಟ ವಿಜಯ್ ಅವರು ಗುರುವಾರ ತಮ್ಮ ಚಿತ್ರೀಕರಣ ಸಮಯದಲ್ಲಿ ಒಬ್ಬರನೊಬ್ಬರು ಭೇಟಿ ಆಗಿದ್ದು, ಇದಕ್ಕೆ ಸಂಬಂಧಿಸಿದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಧೋನಿ ಅವರು ಚೆನ್ನೈನಲ್ಲಿದ್ದಾರೆ. ಚೆನ್ನೈ ತಂಡವು ನಾಳೆ ಐಪಿಎಲ್ ಎರಡನೇ ಭಾಗಕ್ಕಾಗಿ ದುಬೈಗೆ ತೆರಳಲಿದೆ. ಈ ನಡುವೆ ಚೆನ್ನೈ ಟೀ ಕ್ಯಾಪ್ಟನ್, ನಿರ್ಮಾಪಕ ಕೃಷ್ಣನ್ ಜಯರಾಜ್ ನಿರ್ದೇಶನದ ಜಾಹೀರಾತಿನ ಚಿತ್ರೀಕರಣದಲ್ಲಿದ್ದಾರೆ. ಗೋಕುಲಂ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಹಾಗೇ ಧೋನಿ ಶೂಟಿಂಗ್ ಮಾಡುತ್ತಿರುವ ಸ್ಥಳದಲ್ಲೇ ವಿಜಯ್ ಅವರ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಹಾಗಾಗಿ ಧೋನಿ ಇರುವ ವಿಚಾರ ತಿಳಿದ ನಟ ವಿಜಯ್ ತಂಡವು ಧೋನಿ ಅವರನ್ನು ಭೇಟಿ ಮಾಡಲು ಹೊರಟಿದ್ದಾರೆ. ಇಬ್ಬರು ವಿಜಯ್ ಅವರ ಕಾರ್ ವ್ಯಾನ್ ಒಳಗೆ ಕುಳಿತು ಕೆಲಕಾಲ ಮಾತನಾಡಿದ್ದಾರೆ ಎನ್ನಲಾಗಿದೆ

Spread the love

Related Articles

Leave a Reply

Your email address will not be published. Required fields are marked *

Back to top button