ಬೆಂಗಳೂರು ಗ್ರಾಮಾಂತರ
ವನಮಹೋತ್ಸವ ಸಪ್ತಾಹದಲ್ಲಿ ಬಿಎಸ್ವೈ

ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ರಾಷ್ಟ್ರೋತ್ಥಾನ ಗೋ ಶಾಲೆಯಲ್ಲಿ ನಡೆಯುತ್ತಿರುವ ಬೃಂದಾವನ ಸಸಿ ನೆಡುವ ಸಪ್ತಾಹದ ಐದನೇ ದಿನದ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಿ.ಎಂ ಯಡಿಯೂರಪ್ಪ ಗೋ ಶಾಲೆಯ ಬೃಂದಾವನ ಅರಣ್ಯ ವೀಕ್ಷಣೆ ಮಾಡಿದರು.
ಗೋ ಶಾಲೆಗೆ ಬರುವ ಮುನ್ನ ಘಾಟಿ ದೇವಾಲಯದಲ್ಲಿ ದೇವರ ದರ್ಶನ ಪಡೆದ ಯಡಿಯೂರಪ್ಪನವರ ಜೊತೆ, ವಿಜಯೇಂದ್ರ, ಎಸ್.ಆರ್.ವಿಶ್ವನಾಥ್ ಇದ್ದರು.
ಗೋಗಳ ವೀಕ್ಷಣೆ ಮಾಡಿದ ಮಾಜಿ ಮುಖ್ಯಮಂತ್ರಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದರು.
ಕರೋನ ಮೂರನೇ ಅಲೆ ತಡೆಯುವ ಹಿನ್ನೆಲೆಯಲ್ಲಿ ಸರ್ಕಾರಿ ರಜಾ ದಿನಗಳಲ್ಲಿ ದೇವಾಲಯಗಳನ್ನು ಬಂದ್ ಮಾಡಿರುವ ಜಿಲ್ಲಾಡಳಿತ ಯಡಿಯೂರಪ್ಪ ದೇವರ ದರ್ಶನ ಪಡೆದ ನಂತರ ಸಾರ್ಜನಿಕರಿಗೂ ದೇವರ ದರ್ಶನದ ಭಾಗ್ಯ ದೊರೆಯಿತು.




