ಮನರಂಜನೆಸಿನಿಮಾಸೆಲೆಬ್ರಿಟಿ

ಎರಡು ವರ್ಷದ ಮಗುವಿನ ಜೀವ ಉಳಿಸಿದ ನಟ ಸೋನು ಸೂದ್

ಬಾಲಿವುಡ್ ನಟ ಸೋನು ಸೂದ್ ಅವರು ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಅನೇಕ ಜನರಿಗೆ ತಮ್ಮ ನೆರವು ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ನಟ ಸೋನು ಸೂದ್ ಅವರು ಅಪೌಷ್ಟಿಕತೆಯಿಂದ ಬಳಲುತ್ತಿದ್ದ 2 ವರ್ಷದ ಬಾಲಕಿಗೆ ಸಹಾಯ ಮಾಡಿ ಪ್ರಾಣ ಉಳಿಸಿದ್ದಾರೆ.

ಅಪೌಷ್ಟಿಕತೆಯಿಂದ ಬಳಲುತ್ತಿದ್ದ 2 ವರ್ಷದ ಬಾಲಕಿ ಅಪೀಫಾ ಮರಿಯಮ್ ರಕ್ತಹೀನತೆ ಮತ್ತು ವಾಸಿಯಾಗದ ಗಾಯಗಳ ಸಮಸ್ಯೆಯಿಂದ ಬಳಲುತ್ತಿದ್ದಳು. ಆಕೆಯನ್ನು ಎಲ್ ಬಿ ನಗರದ ಆಸ್ಪತ್ರೆಗೆ ದಾಖಲಿಸಿ ಸೂದ್ ಚಾರಿಟಿ ಫೌಂಡೇಶನ್ ಸಹಯೋಗದಲ್ಲಿ ಆಕೆಗೆ ಚಿಕಿತ್ಸೆ ಕೊಡಿಸಿದ್ದು, ಇದೀಗ ಆಕೆ ಗುಣಮುಖಳಾಗಿದ್ದಾಳೆ.

ಬಾಲಕಿ ಅಪೀಫಾ ಮರಿಯಮ್ ಗೆ ಒಂದು ವರ್ಷದ ಹಿಂದೆ ತಲೆ, ಕೈ, ಕುತ್ತಿಗೆ ಮತ್ತು ಬೆನ್ನಿನ ಮೇಲೆ ಆಕಸ್ಮಿಕವಾಗಿ ಬಿಸಿ ಎಣ್ಣೆ ಬಿದ್ದು ಸುಟ್ಟ ಗಾಯಗಳಾಗಿವೆ. ಆಕೆಯ ಹೆತ್ತವರ ಬಳಿ ಚಿಕಿತ್ಸೆಗಾಗಿ ಹೆಚ್ಚಿನ ಹಣವಿಲ್ಲದ ಕಾರಣ ನಟ ಸೋನು ಸೂದ್ ಚಾರಿಟಿ ಫೌಂಡೇಶನ್ ಅನ್ನು ಸಹಾಯಕ್ಕಾಗಿ ಸಂಪರ್ಕಿಸಿದ್ದಾರೆ. 4 ವಾರಗಳ ವರೆಗೆ ವೈದ್ಯರ ತಂಡಗಳಿಂದ ಚಿಕಿತ್ಸೆ, ಆರೈಕೆ ನೀಡಿದ ಹಿನ್ನಲೆಯಲ್ಲಿ ಈಗ ಮಗು ಬದುಕಲು ಸಾಧ್ಯವಾಗಿದೆ ಎನ್ನಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button