ಥಿಯೇಟರ್ಗೆ ಬರಲು ಸಿದ್ಧವಾದ ಓಲ್ಡ್ ಮಾಂಕ್

ಕೋವಿಡ್ ಕಾರಣದಿಂದ ಸರ್ಕಾರ ಥಿಯೇಟರ್ಗಳಲ್ಲಿ 50-50 ಆಸನಗಳ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಸಿನಿಮಾಗಳ ರಿಲೀಸ್ ದಿನಾಂಕವನ್ನ ಮುಂದೂಡಲಾಗಿದೆ. ಕೋವಿಡ್ ಮಧ್ಯೆಯೂ ಕೆಲವು ಸಿನಿಮಾಗಳು ಥಿಯೇಟರ್ಗೆ ಎಂಟ್ರಿಕೊಡೋಕೆ ಸಜ್ಜಾಗಿದ್ದು ಅವುಗಳಲ್ಲಿ ಅದಿತಿ ಪ್ರಭುದೇವ ಹಾಗೂ ಶ್ರೀನಿ ನಟನೆಯ ಓಲ್ಡ್ ಮಾಂಕ್ ಸಿನಿಮಾವೂ ಒಂದು.
ಅದಿತಿ ಪ್ರಭುದೇವ ಹಾಗೂ ಶ್ರೀನಿ ನಟನೆಯ ನಿರೀಕ್ಷಿತ ಸಿನಿಮಾ ಓಲ್ಡ್ ಮಾಂಕ್. ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ರೆ ಈಗಾಗ್ಲೆ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ ಕೋವಿಡ್ ಕಾರಣದಿಂದ ಸಿನಿಮಾದ ಬಿಡುಗಡೆ ದಿನಾಂಕವನ್ನ ಮುಂದೂಡಲಾಗಿತ್ತು. ಹಲವು ದಿನಗಳ ಹಿಂದೆಯೇ ಚಿತ್ರದ ಕೆಲಸಗಳು ಪೂರ್ಣಗೊಂಡಿದ್ದು ಇದೀಗ ಥಿಯೇಟರ್ಗೆ ಬರೋಕೆ ಸಜ್ಜಾಗಿದೆ. ಸಿನಿಮಾವನ್ನ ಫೆಬ್ರವರಿ 24ರಂದು ಬಿಡುಗಡೆ ಮಾಡೋದಾಗಿ ಚಿತ್ರತಂಡ ಘೋಷಿಸಿದೆ. ಓಲ್ಡ್ ಮಾಂಕ್ ಸಿನಿಮಾದಲ್ಲಿ ಶ್ರೀನಿ ಹಿರೋ ಆಗಿ ಕಾಣಿಸಿಕೊಳ್ಳುವುದರ ಜೊತೆಗೆ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
2021ರ ಅಕ್ರೋಬರ್ನಲ್ಲಿ ಚಿತ್ರದ ಟ್ರೈಲರ್ ರಿಲಿಸ್ ಆಗಿದ್ದು ಯಟ್ಯೂಬ್ನಲ್ಲಿ ಸಖತ್ ಸೌಂಡ್ ಮಾಡಿತ್ತು. ಸಾಕಷ್ಟು ಕಾಮಿಡಿಯಾಗಿ ಪ್ರೇಕ್ಷಕರನ್ನ ನಗಿಸಿದ್ದ ಓಲ್ಡ್ ಮಾಂಕ್ ಚಿತ್ರದ ಟ್ರೈಲರ್, ಪ್ರೇಕ್ಷಕರನ್ನ ಸಿನಿಮಾ ನೋಡಲು ಕಾತರದಿಂದ ಕಾಯುವಂತೆ ಮಾಡಿತ್ತು. ಈಗಾಗ್ಲೆ ಬೀರ್ಬಲ್, ಶ್ರೀನಿವಾಸ ಕಲ್ಯಾಣ ಸಿನಿಮಾಗಳನ್ನ ನಿರ್ದೇಶಿಸಿ ಗಮನ ಸೆಳೆದಿದ್ದು ನಟ ಕಂ ನಿರ್ದೇಶಕ ಶ್ರೀನಿ ಈ ಭಾರಿ ಯಾವ ರೀತಿ ಮನರಂಜನೆ ನೀಡಲಿದ್ದಾರೆ ಅನ್ನೋ ಕುತೂಹಲ್ಲಕ್ಕೆ ಫೆಬ್ರವರಿ 24ರಂದು ಉತ್ತರ ಸಿಗಲಿದೆ.




