Breaking NewsLatestಉತ್ತರ ಕನ್ನಡಜಿಲ್ಲಾ ಸುದ್ದಿಸುದ್ದಿ

ಸಹಪಾಠಿಗೆ ಲವ್ ಲೆಟರ್, ಶಿಕ್ಷಕಿಯಿಂದ ಬಾಸುಂಡೆ ಬರಿಸಿಕೊಂಡ ಬಾಲಕ!

ಕಾರವಾರ : ಸಿನಿಮಾಗಳನ್ನು ನೋಡಿ ಪ್ರೌಢ ಶಾಲೆ,ಕಾಲೇಜುಗಳಲ್ಲಿ ಪ್ರೀತಿ-ಪ್ರೇಮ ಎಂದು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರ ಹಿಂದೆ ಬಿದ್ದು ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಹೋಗಿದೆ. ಆದರೆ ಪ್ರಪಂಚದ ಅರಿವು ಇಲ್ಲದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಗೆ ಲವ್ ಲೆಟರ್ ಕೊಟ್ಟು ಶಾಲೆಯ ಶಿಕ್ಷಕಿಯಿಂದ ಬಾಸುಂಡೆ ಬರುವಂತೆ ಪೆಟ್ಟು ತಿಂದಿದ್ದಾನೆ.

ಈ ಘಟನೆ ನಡೆದಿದ್ದು,ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ.ಇಲ್ಲಿನ ಆರನೇ ತರಗತಿ ವಿದ್ಯಾರ್ಥಿ ತನ್ನ ಸಹಪಾಠಿ ವಿದ್ಯಾರ್ಥಿನಿಗೆ ಸಿನಿಮಾ ಸ್ಟೈಲ್ ನಲ್ಲಿ ಲವ್ ಲೆಟರ್ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.ವಿದ್ಯಾರ್ಥಿನಿ ಈ ಲೆಟರ್ ಅನ್ನು ಶಾಲೆಯ ಶಿಕ್ಷಕಿ ಕಲ್ಪನಾ ಹೆಗಡೆ ಅವರಿಗೆ ನೀಡಿದ್ದಾಳೆ.

ಲವ್ ಲೆಟರ್ ನೋಡಿ ಸಿಟ್ಟಾದ ಶಿಕ್ಷಕಿ ವಿದ್ಯಾರ್ಥಿಯನ್ನು ಕರೆಯಿಸಿ ಕೋಪದಿಂದ ಬಾಸುಂಡೆ ಬರುವಂತೆ ಹೊಡೆದಿದ್ದಾರೆ.ಅವರ ಹೊಡೆತಕ್ಕೆ ಬಾಲಕನ ಬೆನ್ನುಗಳಲ್ಲಿ ಬಾಸುಂಡೆ ಬಂದಿದೆ.ಇನ್ನು ಈ ವಿಷಯ ತಡವಾಗಿ ಪೋಷಕರಿಗೆ ತಿಳಿದಿದ್ದು, ಬಾಲಕನ ಬಟ್ಟೆ ಬಿಚ್ಚಿ ನೋಡಿದಾಗ ಬೆನ್ನು ಕೆಂಪಾಗಿತ್ತು.

ತಕ್ಷಣ ಪೋಷಕರು ಶಿಕ್ಷಕಿಯನ್ನು ತರಾಟೆ ತೆಗೆದುಕೊಂಡಿದ್ದು,ಗಲಾಟೆ ನಡೆದಿದೆ. ಕೊನೆಗೆ ಶಿಕ್ಷಕಿ ಪೋಷಕರಲ್ಲಿ ಕ್ಷಮೆ ಕೇಳುವ ಮೂಲಕ ಪ್ರಕರಣ ಇತ್ಯರ್ಥವಾಗಿದೆ. ಆದರೆ ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್,ಸಿನಿಮಾ ಎಂದು ಚಿಕ್ಕ ವಯಸ್ಸಿನಲ್ಲಿ ದಾರಿ ತಪ್ಪುತ್ತಿರುವುದು ಯುವ ಪೀಳಿಗೆ ಯಾವ ಕಡೆ ವಾಲುತ್ತಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.ಇದರ ಜೊತೆಗೆ ತಪ್ಪನ್ನು ತಿದ್ದಬೇಕಾದ ಶಿಕ್ಷಕರು ಕ್ರೌರ್ಯ ಮೆರೆದಿದ್ದು ಮಾತ್ರ ಖಂಡನೀಯವಾಗಿದೆ.ಘಟನೆ  ಸಂಬಂಧ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button