ಮನರಂಜನೆಸಿನಿಮಾಸೆಲೆಬ್ರಿಟಿ

ಬಪ್ಪಿ ಲಹರಿ ನಿತ್ಯ ಧರಿಸುತ್ತಿದ್ದ ಚಿನ್ನಾಭರಣಗಳೆಷ್ಟು ಗೊತ್ತಾ?

ಸಾಮಾನ್ಯವಾಗಿ ಚಿನ್ನ ಎಂದರೆ ಹೆಣ್ಣು ಮಕ್ಕಳಿಗೆ ಬಲು ಪ್ರೀತಿ. ಮೈಮೇಲೆ ಅದೆಷ್ಟೇ ಒಡವೆ ಇದ್ದರು ಇನ್ನೂ ಬೇಕು ಮತ್ತು ಬೇಕು ಅನ್ನೋ ಮನಸ್ತಿತಿ ಅವರದ್ದು. ಪುರುಷರಿಗೆ ಚಿನ್ನದ ಬಗ್ಗೆ ಸಾಮಾನ್ಯವಾಗಿ ಕೊಂಚ ಮಟ್ಟಿನ ಒಲವು ಕಮ್ಮಿನೆ. ಆದ್ರೆ ಇದೀಗ ನಿಧನ ಹೊಂದಿರುವ ಖ್ಯಾತ ಗಾಯಕಿ ಬಪ್ಪಿ ಲಹರಿಗೆ ಚಿನ್ನಾಭರಣ ಅಂದ್ರೆ ಬಲು ಇಷ್ಟವಂತೆ. ಹಾಗಾದ್ರೆ ಬಪ್ಪಿ ಲಹರಿ ಮೈಮೇಲೆ ಅದೆಷ್ಟು ಚಿನ್ನಾಭರಣ ಧರಿಸುತ್ತಿದ್ರು ಗೊತ್ತ?


ತಮ್ಮದೇ ಆದ ವಿಭಿನ್ನ ಹಾಡುಗಳ ಮೂಲಕ ಕೇಳುಗರನ್ನ ಯಾವ ರೀತಿ ಆಕರ್ಷಿಸುತ್ತಿದ್ದರೋ ಅದೇ ರೀತಿ ಬಪ್ಪಿ ಲಹರಿ ತಾವು ಧರಿಸುತ್ತಿದ್ದ ಚಿನ್ನಾಭರಣಗಳಿಂದಲೂ ನೋಡುಗರ ಗಮನ ಸೆಳೆಯುತ್ತಿದ್ದರು. ಬಪ್ಪಿ ಲಹರಿ ಅವರಿಗೆ ಅದ್ಯಾವ ಮಟ್ಟಿಗೆ ಚಿನ್ನಾಭರಣಗಳ ಮೇಲೆ ವ್ಯಾಮೋಹ ಇತ್ತೆಂದರೆ ಅವರೇ ಸಂದರ್ಶನವೊಂದರಲ್ಲಿ ಅದರ ಬಗ್ಗೆ ಹೇಳಿಕೊಂಡಿದ್ದರು. ನನಗೆ ಯಾಕಾದರೂ ರಾತ್ರಿ ಆಗುತ್ತೋ? ರಾತ್ರಿಯ ವೇಳೆ ಚಿನ್ನಾಭರಣ ಇಚ್ಚಿಟ್ಟು ಮಲಗಿಕೊಳ್ಳಬೇಕಲ್ಲ ಎನ್ನುವ ಸಂಕಟ ಪ್ರತಿ ದಿನವೂ ಕಾಡುತ್ತೆ ಎಂದಿದ್ದರು ಬಪ್ಪಿ ಲಹರಿ.


ಬಪ್ಪಿ ಲಹರಿ ಗೋಲ್ಡ್ ಮ್ಯಾನ್ ಎಂದೇ ಹೇಳಬಹುದು. ಅಷ್ಟರ ಮಟ್ಟಿಗಿನ ಚಿನ್ನಾಭರಣ ಬಪ್ಪಿ ಲಹರಿ ಮೈಮೇಲೆ ಸದಾ ಇರುತ್ತಿತ್ತು. ಕೊರಳ ತುಂಬಾ ದೊಡ್ಡ ದೊಡ್ಡ ಸರ, ಕೈತುಂಬ ಉಂಗುರಗಳನ್ನ ಯಾವಾಗಲು ಬಪ್ಪಿ ಧರಿಸುತ್ತಿದ್ದರು. ಬಪ್ಪಿ ಒಟ್ಟು ಏಳು ದೊಡ್ಡ ಹಾಗೂ ಎಂಟು ಚಿಕ್ಕ ಸರಗಳನ್ನ ಧರಿಸುತ್ತಿದ್ದರು. ಜೊತೆಗೆ ಲಾಕೆಟ್ ಹೊಂದಿರುವ ಎರಡು ಸರಗಳನ್ನ ಧರಿಸುತ್ತಿದ್ದರು.


ಬಪ್ಪಿ ಲಹರಿ ಒಟ್ಟು ಹನ್ನೊಂದು ಉಂಗುರಗಳನ್ನ ಸದಾ ಧರಿಸುತ್ತಿದ್ದರು. ಜೊತೆಗೆ ಕೆಲವು ಭಾರಿ ಚಿನ್ನ ಲೇಪಿತ ವಸ್ತಗಳನ್ನು ಧರಿಸಿಕೊಂಡು ಬರುತ್ತಿದ್ದರು. ಇವುಗಳನ್ನ ಕಾಯಲೆಂದೇ ಇಬ್ಬರು ಅಂಗರಕ್ಷಕರನ್ನು ಇಟ್ಟುಕೊಂಡಿದ್ದರು.


ಬಪ್ಪಿ ಲಹರಿ 2014ರ ಚುನಾವಣೆ ವೇಳೆ ಸಲ್ಲಿಸಿದ ಅಫಿಡೆವಿಟ್​ನಲ್ಲಿ 967ಗ್ರಾಂ ಚಿನ್ನ, 8.9 ಕೆಜಿ ಬೆಳ್ಳಿ ಹಾಗೂ 4 ಕೋಟಿ ಮೌಲ್ಯದ ವಜ್ರವಿರೋದಾಗಿ ಹೇಳಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button