ಮನರಂಜನೆಸಿನಿಮಾಸೆಲೆಬ್ರಿಟಿ
ಪವನ್ ಕಲ್ಯಾಣ್ ಸಿನಿಮಾ ನೋಡಲು ತಂದೆ ಹಣ ಕೊಡದಿದ್ದಕ್ಕೆ 11ರ ಬಾಲಕ ಆತ್ಮಹತ್ಯೆ

ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಭೀಮ್ಲಾ ನಾಯಕ್ ಸಿನಿಮಾ ನೋಡಲು ಪೋಷಕರು ಟಿಕೆಟ್ ಹಣ ನೀಡಲಿಲ್ಲವೆಂದು 11 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೆಲಂಗಾಣ ಮೂಲದ 8ನೇ ತರಗತಿ ವಿದ್ಯಾರ್ಥಿ ಪಿ.ನವದೀಪ್ ಮೃತ ಬಾಲಕ. ನವದೀಪ್ ಪವನ್ ಕಲ್ಯಾಣ್ರ ಅಪ್ಪಟ ಅಭಿಮಾನಿಯಾಗಿದ್ದು ಸ್ನೇಹಿತರ ಜೊತೆ ಭೀಮ್ಲಾ ನಾಯಕ್ ಸಿನಿಮಾ ನೋಡಲು ಪ್ಲಾನ್ ಮಾಡಿಕೊಂಡಿದ್ದ.
ಫೆಬ್ರವರಿ 25ರಂದು ಭೀಮ್ಲಾ ನಾಯಕ್ ಸಿನಿಮಾ ರಿಲೀಸ್ ಆಗ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಮೊದಲೇ ಟಿಕೇಟ್ ಬುಕ್ಕಿಂಗ್ಗೆ ಅವಕಾಶ ನೀಡಿದೆ. ಹೀಗಾಗಿ ಬಾಲಕ ಟಿಕೇಟ್ ಖರೀದಿ ಮಾಡಲು ತಂದೆಯ ಬಳಿ 300 ರೂಪಾಯಿ ಹಣ ಕೇಳಿದ್ದಾನೆ. ಆದರೆ ತಂದೆ ಅದೆಷ್ಟೇ ಕೇಳಿದರು ಹಣ ನೀಡಲು ನಿರಾಕರಣೆ ಮಾಡಿದ್ದಾರೆ. ಇದರಿಂದ ಮನನೊಂದ ಬಾಲಕ ಮನೆಯ ಬಾಲ್ಕಾನಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.




