ಸದ್ದಿಲ್ಲದೆ ಶೂಟಿಂಗ್ ಮುಗಿಸಿದ ಗುರುಪ್ರಸಾದ್ ನಿರ್ದೇಶನದ ರಂಗನಾಯಕ

ಮಠ ಖ್ಯಾತಿಯ ಗುರು ಪ್ರಸಾದ್ ಸಿನಿಮಾವೊಂದನ್ನ ಆರಂಭಿಸಿದ್ರೆ ಅದು ಯಾವಾಗ ಕಂಪ್ಲೀಟ್ ಆಗುತ್ತೆ ಅನ್ನೋದೆ ಗೊತ್ತಾಗಲ್ಲ. ಈಗಾಗ್ಲೆ ಗುರುಪ್ರಸಾದ್ ನಿರ್ದೇಶನದ ‘ಮಠ’ ‘ಎದ್ದೇಳು ಮಂಜುನಾಥ’, ‘ಡೈರೆಕ್ಟರ್ ಸ್ಪೆಷಲ್’ ಹಾಗೂ ‘ಎರಡನೇ ಸಲ’ ಸಿನಿಮಾಗಳು ಅವಧಿಗೂ ಮೀರಿ ಚಿತ್ರೀಕರಣ ಮುಗಿದ್ದಿತ್ತು. ಅಲ್ಲದೆ ‘ಅದೇಮಾ’ ಸಿನಿಮಾ ಸೆಟ್ಟೇರಿ ನಾಲ್ಕು ವರ್ಷ ಕಳೆದಿದ್ರು ಇನ್ನೂ ಶೂಟಿಂಗ್ ಕಂಪ್ಲೀಟ್ ಮಾಡಿಲ್ಲ. ಆದ್ರೆ ಈ ಬಾರಿ ಹಾಗಾಗಿಲ್ಲ. ಜಗೇಶ್ ಹಾಗೂ ಗುರುಪ್ರಸಾದ್ ಕಾಂಬಿನೇಷನ್ನ ‘ರಂಗನಾಯಕ’ ಸಿನಿಮಾ ಕೆಲವೇ ತಿಂಗಳಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿದೆ.
ಮಠ ಹಾಗೂ ಎದ್ದೇಳು ಚಿತ್ರದ ಬಳಿಕ ನಟ ಜಗ್ಗೇಶ್ ಹಾಗೂ ನಿರ್ದೇಶಕ ಗುರುಪ್ರಸಾದ್ ಮೂರನೇ ಬಾರಿಗೆ ಒಂದಾಗ್ತಿದ್ದಾರೆ. ಈ ಹಿಂದೆ ತೆರೆಕಂಡಿದ್ದ ಎರಡು ಸಿನಿಮಾಗಳು ಸೂಪರ್ ಹಿಟ್ ಆಗಿ ತಿಜೋರಿ ಭರ್ತಿ ಮಾಡಿದ್ದವು. ಹೀಗಾಗಿ ರಂಗನಾಯಕ ಚಿತ್ರದ ಬಗ್ಗೆಯು ಸಾಕಷ್ಟು ನಿರೀಕ್ಷೆ ಇದ್ದು ಅಷ್ಟೇ ಫಾಸ್ಟ್ ಆಗಿ ನಿರ್ದೇಶಕರು ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ.
2020ರ ಡಿಸೆಂಬರ್ ತಿಂಗಳ ಕೊನೆಯಲ್ಲಿ ಸೆಟ್ಟೇರಿದ್ದ ರಂಗನಾಯಕ ಸಿನಿಮಾ ಬಳಿಕ ಕೋವಿಡ್ ಕಾರಣದಿಂದ ತಡವಾಗಿತ್ತು. 2021ರ ಮಧ್ಯದಲ್ಲಿ ಮತ್ತೆ ಶೂಟಿಂಗ್ ಆರಂಭಿಸಿದ್ದ ಗುರು ಪ್ರಸಾದ್ ಕೆಲವೇ ಕೆಲವು ತಿಂಗಳಲ್ಲಿ ಚಿತ್ರೀಕರಣ ಕಂಪ್ಲೀಟ್ ಮಾಡಿದ್ದಾರೆ. ಬೆಂಗಳೂರಿನ ಹೊರ ವಲಯದಲ್ಲಿ ಬೃಹತ್ ಸೆಟ್ ಹಾಕಿ ಚಿತ್ರೀಕರಣ ಕಂಪ್ಲೀಟ್ ಮಾಡಲಾಗಿದೆ. ರಂಗನಾಯಕ ಚಿತ್ರದ ಬಹುತೇಕ ಶೂಟಿಂಗ್ ಇದೇ ಸೆಟ್ನಲ್ಲಿ ಕಂಪ್ಲೀಟ್ ಆಗಿದೆ. ಕಲಾವಿದರ ಬದುಕಿನ ಮತ್ತೊಂದು ಮುಖವನ್ನ ರಂಗನಾಯಕ ಸಿನಿಮಾದಲ್ಲಿ ತೋರಿಸಲು ನಿರ್ದೇಶಕರು ಮುಂದಾಗಿದ್ದಾರೆ.




