ಮನರಂಜನೆಸಿನಿಮಾಸೆಲೆಬ್ರಿಟಿ

Kajal Aggarwal: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಕಾಜಲ್ ಅಗರ್ವಾಲ್

ದಕ್ಷಿಣ ಭಾರತದ ಜನಪ್ರಿಯ ನಟಿ ಕಾಜಲ್ ಅಗರ್ವಾಲ್ ಅವರು ಕಳೆದ ಅಕ್ಟೋಬರ್ ನಲ್ಲಿ ತಮ್ಮ ಸ್ನೇಹಿತ ಮತ್ತು ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾದರು. ಈ ದಂಪತಿಗಳು ತಮ್ಮ ಸಮಯವನ್ನು ಒಟ್ಟಿಗೆ ಕಳೆಯುತ್ತಿದ್ದಾರೆ. ವಿವಿಧ ಸ್ಥಳಗಳಿಗೆ ಸಂಚರಿಸುತ್ತಿದ್ದಾರೆ.

ಇವರ ಬಗ್ಗೆ ಇತ್ತೀಚೆನ ಸುದ್ದಿ ಏನೆಂದರೆ ನಟಿ ಕಾಜಲ್ ಅಗರ್ವಾಲ್ ಮತ್ತು ಗೌತಮ್ ಅವರು ಮೊದಲ ಮಗುವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ನಟಿ ಕಾಜಲ್ ಅವರು ವಿರಾಮ ತೆಗೆದುಕೊಳ್ಳುವ ಉದ್ದೇಶದಿಂದ ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರಕ್ಕಾಗಿ ತನ್ನ ದೃಶ್ಯಗಳನ್ನು ಬೇಗನೆ ಮುಗಿಸುವಂತೆ ಅವರು ಚಿತ್ರತಂಡವನ್ನು ಕೇಳಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಆದರೆ ಈ ಬಗ್ಗೆ ನಟಿಯಾಗಲಿ ಮತ್ತು ಅವರ ಪತಿ ಗೌತಮ್ ಅವರಾಗಲಿ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿಯಾದರೂ ಕೂಡ ಪರದೆಯ ಮೇಲೆ ನಟಿಯ ಅನುಪಸ್ಥಿತಿಯನ್ನು ನೋಡಲಿರುವ ಕಾರಣ ಚಿಂತಿತರಾಗಬಹುದು.

Spread the love

Related Articles

Leave a Reply

Your email address will not be published. Required fields are marked *

Back to top button