Latestಟಿವಿಮನರಂಜನೆಮಹಿಳೆರಾಷ್ಟ್ರೀಯಸಿನಿಮಾಸೆಲೆಬ್ರಿಟಿ

ಆ್ಯಂಡ್ ದಿ ವಿನ್ನರ್ ಈಸ್ ದಿವ್ಯಾ ಅಗರ್​ವಾಲ್!

ನವದೆಹಲಿ: ಬಿಗ್​ಬಾಸ್​ ಓಟಿಟಿ ಮೊದಲ ಸೀಸನ್ನಿನ ವಿನ್ನರ್ ಆಗಿ ರೂಪದರ್ಶಿ, ರಿಯಾಲಿಟಿ ಟಿವಿ ಸ್ಟಾರ್ ದಿವ್ಯಾ ಅಗರ್​ವಾಲ್ ಆಯ್ಕೆಯಾಗಿದ್ದಾರೆ. ಓಟಿಟಿ ಆವೃತ್ತಿಯ ಮೊದಲ ವಿಜೇತೆ ಎಂಬ ದಾಖಲೆ ಅವರದಾಗಿದೆ.

ಟ್ರೋಫಿ ಮತ್ತು 25 ಲಕ್ಷ ನಗದನ್ನು ದಿವ್ಯಾ ಗೆದ್ದಿದ್ದಾರೆ.

ಅಂತಿಮ ಸುತ್ತಿನಲ್ಲಿ ದಿವ್ಯಾ ಅವರೊಂದಿಗೆ ನಿಶಾಂತ್ ಭಟ್ ಹಾಗೂ ಶರ್ಮಿತಾ ಶೆಟ್ಟಿ ಇದ್ದರು. ಇಬ್ಬರನ್ನೂ ಹಿಂದಿಕ್ಕಿ ದಿವ್ಯಾ ಬಿಗ್​ಬಾಸ್ ಆಗಿ ಹೊರಹೊಮ್ಮಿದರು. ನಿಶಾಂತ್ ಭಟ್ ಮತ್ತು ಶರ್ಮಿತಾ ಶೆಟ್ಟಿ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಆದರು.

ಬಿಗ್​ಬಾಸ್ ಓಟಿಟಿ ಆವೃತ್ತಿಯ ಅಂತಿಮ ಸುತ್ತಿನಲ್ಲಿದ್ದ ಈ ಮೂವರೂ ಅಕ್ಟೋಬರ್​ನಲ್ಲಿ ಆರಂಭವಾಗಲಿರುವ ಬಿಗ್​ಬಾಸ್ 15ನೇ ಆವೃತ್ತಿಯ ಭಾಗವಾಗಿರಲಿದ್ದಾರೆ.

ಬಿಗ್​ಬಾಸ್ ಓಟಿಟಿ ಆವೃತ್ತಿಯು ಆರು ವಾರಗಳ ಜರ್ನಿಯಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button