ಸಿನಿಮಾಸೆಲೆಬ್ರಿಟಿ

ಖಾಸಗಿ ವಾಹಿನಿ ಮೇಲೆ ‘ನಾರಾಯಣ’ ಗರಂ!

ಪೂರ್ಣ ವಿ-ರಾಮ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೂರು ದಿನಗಳಿಂದ ಗರಂ ಆಗಿದ್ದಾರೆ. ಖಾಸಗೀ ವಾಹಿನಿಯೊಂದರಲ್ಲಿ ಪ್ರಸಾರವಾದ ತಮ್ಮ ಕುರಿತಾದ ಕಾರ್ಯಕ್ರಮವೊಂದರ ವಿರುದ್ದ ಸಮರ ಸಾರಿದ್ದು, ಇನ್ನು ಹತ್ತು ದಿನದಲ್ಲಿ ತಾನು ಏನು ಮಾಡಲಿದ್ದೇನೆ ಎಂದು ತಿಳಿಸುತ್ತೇನೆ. ಅದಕ್ಕೆ ಬೇಕಾದ ಪ್ರಿಪರೇಷನ್ ಮಾಡಿಕೊಳ್ಳುತ್ತಿದ್ದೇನೆ ಎಂದು ಇಷ್ಟುದ್ದದ ಪತ್ರ ಬರೆದಿದ್ದಾರೆ ರಕ್ಷಿತ್.

ರಕ್ಷಿತ್ ಪುಷ್ಕರ್ ಬಿರುಕಿನ ಬಗ್ಗೆ ನ್ಯೂಸ್!
ಎರಡು ದಿನಗಳ ಹಿಂದೆ ರಕ್ಷಿತ್ ಶೆಟ್ಟಿ ಮತ್ತು ಅವನೇ ಶ್ರೀ ಮನ್ ನಾರಾಯಣ ಸಿನೆಮಾದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಡುವೆ ಮನಸ್ಥಾಪ ಆಗಿದೆ ಎಂಬ ಕುರಿತು ವಿಸ್ತಾರವಾದ ವರದಿ ಮಾಡಿತ್ತು. ರಕ್ಷಿತ್ ಅವರನ್ನ ನಂಬಿ ಶ್ರೀ ಮನ್ ನಾರಾಯಣ ಸಿನೆಮಾದ ನಿರ್ಮಾಪಕರು ಬೀದಿಗೆ ಬಂದರು ಎನ್ನುವ ಅರ್ಥದಲ್ಲಿ ಸುದ್ದಿ ಮಾಡಲಾಗಿತ್ತು. ಈ ಕುರಿತು ಕೋಪ ಹಾಗೂ ಬೇಸರ ವ್ಯಕ್ತಪಡಿಸಿರುವ ಶೆಟ್ಟರು ಇದಕ್ಕೆ ಅತೀ ಶೀಘ್ರದಲ್ಲೇ ಉತ್ತರ ಕೊಡುತ್ತೇನೆ ಎಂದಿದ್ದಾರೆ.

ಕಾನೂನು ಸಮರ?
ರಕ್ಷಿತ್ ಹೇಳಿರುವ ಪ್ರಕಾರ ಅವರು ಕಾನೂನು ರೀತಿ ಕ್ರಮ ಕೈಗೊಳ್ಳಲಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಮನಸಿಗೆ ತುಂಬಾ ಹರ್ಟ್ ಆಗಿದೆ. ಇನ್ನು ಸುಮ್ಮನೆ ಕೂತರೆ ಪ್ರಯೋಜನ ಇಲ್ಲ ಎಂದು ಸಿಟ್ಟಿಗೆದ್ದು ಪತ್ರ ಬರೆದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button