Breaking NewsLatestರಾಷ್ಟ್ರೀಯಸಿನಿಮಾಸೆಲೆಬ್ರಿಟಿ
ಆಮೀರ್ ಖಾನ್, ಕಿರಣ್ ರಾವ್ ವಿಚ್ಛೇದನಕ್ಕೆ ನಿರ್ಧಾರ

ನವದೆಹಲಿ: ನಟ ಆಮೀರ್ ಖಾನ್ ಮತ್ತು ಕಿರಣ್ ರಾವ್ ಶನಿವಾರ ಬೆಳಗ್ಗೆ ತಮ್ಮ ವಿಚ್ಛೇದನದ ನಿರ್ಧಾರ ಪ್ರಕಟಿಸಿದ್ದಾರೆ. ಇದರೊಂದಿಗೆ 15 ವರ್ಷಗಳ ಅವರ ದಾಂಪತ್ಯ ಕೊನೆ ಕಂಡಿದೆ.
2005ರಲ್ಲಿ ಕಿರಣ್ ಅವರನ್ನು ಆಮೀರ್ ಮದುವೆಯಾಗಿದ್ದರು. ಈ ದಾಂಪತ್ಯದಲ್ಲಿ ಅವರಿಗೆ 2011ರಲ್ಲಿ ಪುತ್ರ ಆಜಾದ್ ಹುಟ್ಟಿದ್ದ. ಲಗಾನ್ ಚಿತ್ರದ ಸೆಟ್ನಲ್ಲಿ ಸಹಾಯಕ ನಿರ್ದೇಶಕಿಯಾಗಿದ್ದ ಕಿರಣ್ ರಾವ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು ಆಮೀರ್.
ವಿಚ್ಛೇದನ ಸಂಬಂಧ ಜಂಟಿ ಹೇಳಿಕೆ ಪ್ರಕಟಿಸಿರುವ ಅವರು, 15 ವರ್ಷಗಳ ಅವಧಿಯ ಸುಂದರ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಜೀವನದ ಹೊಸ ಅಧ್ಯಾಯ ಆರಂಭಿಸಲು ಬಯಸಿದ್ದು, ಪತಿ ಪತನಿಯಾಗಿ ಮುಂದುವರಿಯದಿದ್ದರೂ, ಪೋಷಕರಾಗಿ ಮಗನೊಂದಿಗಿರುತ್ತೇವೆ, ಅವನ ಬೆಳವಣಿಗೆಯಲ್ಲಿ ಸಹಭಾಗಿಗಳಾಗಿರುತ್ತೇವೆ ಎಂದಿದ್ದಾರೆ.
ವಿಚ್ಛೇದನದ ಬಗ್ಗೆ ಕೆಲ ಸಮಯದ ಹಿಂದೆಯೇ ನಿರ್ಧರಿಸಿದ್ದು, ಈಗ ಔಪಚಾರಿಕವಾಗಿ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ಸೂಕ್ತ ಸಮಯವೆನ್ನಿಸಿದೆ ಎಂದು ಇಬ್ಬರೂ ಹೇಳಿಕೊಂಡಿದ್ದಾರೆ.
