ಮನರಂಜನೆಸಿನಿಮಾಸೆಲೆಬ್ರಿಟಿ

Actress Soujanya Suicide: ಆತ್ಮಹತ್ಯೆಗೆ ಶರಣಾದ ಕನ್ನಡ ಕಿರುತೆರೆ ನಟಿ ಸೌಜನ್ಯಾ

ಬೆಂಗಳೂರು : ಕನ್ನಡದ ಖ್ಯಾತ ಕಿರುತೆರೆ ನಟಿ ಸೌಜನ್ಯಾ (25 ವರ್ಷ) ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ದೊಡ್ಡಬೆಲೆ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.

ನಗರದ ಹೊರವಲಯದ ದೊಡ್ಡಬೆಲೆ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ನಲ್ಲಿ ಸೌಜನ್ಯಾ ತನ್ನ ಬಾಯ್ ಫ್ರೆಂಡ್ ವಿವೇಕ್ ಜೊತೆ ವಾಸವಾಗಿದ್ದರು. ಗೆಳಯನಿಗೆ ತಿಂಡಿ ತರುವಂತೆ ಹೇಳಿ ಹೊರ ಕಳುಹಿಸಿದ್ದ ಸೌಜನ್ಯಾ ಬಳಿಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸೌಜನ್ಯಾ ಅವರು ಕೊಡಗು ಜಿಲ್ಲೆಯ ಕುಶಾಲನಗರದ ಮೂಲದವರಾಗಿದ್ದು, ಹಲವಾರು ಧಾರಾವಾಹಿ ಹಾಗೂ ಚೌಕಟ್ಟು, ಫನ್​ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಆತ್ಮಹತ್ಯೆಗೂ ಮುನ್ನ ಡೆತ್​ನೋಟ್ ಬರೆದಿರುವ ಸೌಜನ್ಯಾ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ. ನನ್ನನ್ನು ಕ್ಷಮಿಸಿ ಅಪ್ಪ-ಅಮ್ಮ ಅಂತ ಡೆತ್ ನೋಟ್​ನಲ್ಲಿ ಕ್ಷಮೆ ಕೇಳಿದ್ದಾರೆ. ಸ್ಥಳಕ್ಕೆ ಕುಂಬಳಗೂಡು ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಡೆತ್​ ನೋಟ್

ಮೂರು ದಿನದ ಹಿಂದೆಯೇ ಡೆತ್ ನೋಟ್ ಬರೆದಿಟ್ಟಿದ್ದ ಸೌಜನ್ಯ, ಅವರು ಸಾಯಲು ಇಷ್ಟವಿಲ್ಲದಿದ್ದರೂ ಆತ್ಮಹತ್ಯೆ ಮಾಡಿಕೊಂಡಿರೋ ರೀತಿ ಇದೆ ಅನ್ನೋದು ಡೆತ್​ನೋಟ್​ನಿಂದ ತಿಳಿಯುತ್ತಿದೆ ಎನ್ನಲಾಗಿದೆ. ಅಲ್ಲದೆ ತಮ್ಮ ಮಾನಸಿಕ ಆರೋಗ್ಯ ಅಷ್ಟಾಗಿ ಸರಿಯಾಗಿಲ್ಲ ಎಂದೂ ಮರಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪದೇ ಪದೇ ಪೋಷಕರು ಹಾಗೂ ಅಣ್ಣನ ಬಳಿ ಕ್ಷಮೆ ಕೇಳಿದ್ದು, ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಅಪ್ಪನಿಗೆ ಮನವಿ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button