ಲತಾ ಮಂಗೇಶ್ಕರ್ ಆರೋಗ್ಯದ ಕುರಿತು ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳು

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ದೃಡಪಟ್ಟಿದ್ದು ಕಳೆದ ಹದಿನೈದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾದ ದಿನದಿಂದಲೂ ಲತಾ ಮಂಗೇಶ್ಕರ್ ಆರೋಗ್ಯದ ಕುರಿತಾಗಿ ಸಾಕಷ್ಟು ಇಲ್ಲ ಸಲ್ಲದ ಸುದ್ದಿಗಳು ಹಾರಿದಾಡ್ತಿದೆ. ಇದೀಗ ಮತ್ತಷ್ಟು ಸುದ್ದಿಗಳು ಹಾರಿದಾಡ್ತಿದ್ದು ಅಭಿಮಾನಿಗಳಿಗೆ ಬೇಸರ ತರಿಸಿದೆ,
ಲತಾ ಮಂಗೇಶ್ಕರ್ ಅವರಿಗೆ ಜನವರಿ 8ನೇ ತಾರೀಖು ಕೋವಿಡ್ ದೃಡಪಟ್ಟಿದ್ದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, 92 ವರ್ಷ ವಯಸ್ಸಿನ ಗಾಯಕಿಗೆ ಕೋವಿಡ್ ಜೊತೆಗೆ ನ್ಯೂಮೋನಿಯ ಕೂಡ ದೃಡಪಟ್ಟಿದ್ದು ಅಭಿಮಾನಿಗಳಲ್ಲಿ ಆತಂಕಕ್ಕೆ ದೂಡುವಂತೆ ಮಾಡಿದೆ. ಇದ್ರ ಜೊತೆಗೆ ಕಿಡಿಗೇಡಿಗಳು ಹಬ್ಬಿಸುತ್ತಿರುವ ಸುದ್ದಿಗಳು ಮತ್ತಷ್ಟು ಗೊಂದಲಕ್ಕಿಡು ಮಾಡಿದೆ,
ಆರೋಗ್ಯ ಸುಧಾರಣೆಗೆ ಲತಾ ಅವರ ಮನೆಯಲ್ಲಿ ವಿಶೇಷ ಪೂಜೆ ನಡೆಸಲಾಗಿದೆ. ಶಿವ ರುದ್ರರನ್ನ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಗಿದೆ. ಅಲ್ಲದೆ ಅವರ ಆರೋಗ್ಯದ ಕುರಿತಾಗಿ ಯಾವುದೇ ರೀತಿಯ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ. ಕೋವಿಡ್ ಪಾಸಿಟಿವ್ ಆಗಿದ್ದ ಸಿಬ್ಬಂದಿಯೊರ್ವರಿಂದ ಲತಾ ಮಂಗೇಶ್ಕರ್ ಅವರಿಗೆ ಸೋಂಕು ತಗುಲಿದೆ ಎನ್ನಲಾಗ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಕೆಲವು ಕಿಡಿಗೇಡಿಗಳು ಲತಾ ಮಂಗೇಶ್ಕರ್ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬರುತ್ತಿಲ್ಲ ಎಂಬ ಸುದ್ದಿ ಹರಡಿಸಿದ್ದರು, ಕೆಲವರಂತು ಲತಾ ಮಂಗೇಶ್ಕರ್ ಇನ್ನಿಲ್ಲ ಎಂದು ಬರೆದುಕೊಂಡಿದ್ದರು. ಗಾಯಕಿಯ ಕುರಿತಾಗಿ ಈ ರೀತಿ ಇಲ್ಲ ಸಲ್ಲದ ಸುದ್ದಿಗಳು ಹರಿದಾಡ್ತಿರೋದು ಅವರ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ.
ಲತಾ ಮಂಗೇಶ್ಕರ್ ಆರೋಗ್ಯದ ಕುರಿತು ಸ್ಮೃತಿ ಇರಾನಿ ರೂಮರ್ಸ್ ಗಳನ್ನ ಹರಡದಂತೆ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಲತಾ ಮಂಗೇಶ್ಕರ್ ಅವರನ್ನ ನೋಡಿಕೊಳ್ಳುತ್ತಿರುವ ಬ್ರೀಜ್ ಕ್ಯಾಂಡಿ ಆಸ್ಪತ್ರೆಯ ವೈದ್ಯ ಪ್ರತೀತಿ ಸಮ್ದಾರಿ ಬರೆದುಕೊಂಡಿರುವ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ.
ಸಹೋದರಿ ಲತಾ ಅವರ ಆರೋಗ್ಯದಲ್ಲಿ ಮೊದಲಿಗಿಂತಲೂ ಸಾಕಷ್ಟು ಸುಧಾರಣೆ ಕಂಡು ಬರುತ್ತಿದೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾವು ಕೂಡ ಅವರು ಆರೋಗ್ಯ ಸಂಪೂರ್ಣವಾಗಿ ಗುಣಮುಖರಾಗುವುದಕ್ಕಾಗಿ ಎದುರು ನೋಡುತ್ತಿದ್ದು ಅದಕ್ಕಾಗಿ ಪ್ರಾರ್ಥಿಸುತ್ತಿದ್ದೇವೆ ಎಂದು ವೈದ್ಯ ಪ್ರತೀತ್ ಸಮ್ದಾರಿ ಬರೆದುಕೊಂಡಿದ್ದಾರೆ.
2019ರ ನವೆಂಬರ್ ನಲ್ಲಿ ಉಸಿರಾಟದ ಸಮಸ್ಯೆಯಿಂದ ಲತಾ ಮಂಗೇಶ್ಕರ್ ಆಸ್ಪತ್ರೆಗೆ ದಾಖಲಾಗಿದ್ದರು,. ವೈರಲ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗದ್ದಾಗಿ ಅವರ ಸಹೋದರಿ ತಿಳಿಸಿದ್ದರು, ಇದೀಗ ಮತ್ತೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರೋ ಲತಾ ಮಂಗೇಶ್ಕರ್ ಆದಷ್ಟು ಬೇಗ ಗುಣಮುಖರಾಗಿ ಮನೆಗೆ ಮರಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ.



