ಇವರಿಂದಾಗಿ ನಾನು ಬದುಕಿದ್ದೇನೆ: ಪ್ರಮುಖ ವ್ಯಕ್ತಿಗಳ ಬಗ್ಗೆ ಮಾತನಾಡಿದ ನಟಿ ಸಮಂತ

ನಾಗಚೈತನ್ಯರಿಂದ ದೂರವಾಗಿರೋ ನಟಿ ಸಮಂತ ಇದೀಗ ಸಿನಿಮಾ ಹಾಗೂ ಸುತ್ತಾಟಗಳಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಬ್ಯುಸಿಯಾಗಿರೋ ಸಮಂತ ತಮ್ಮ ಜೀವನದಲ್ಲಿ ಬಂದ ಅಮೂಲ್ಯ ವ್ಯಕ್ತಿಗಳ ಬಗ್ಗೆ ಆಗಾಗ ಹೇಳಿಕೊಳ್ತಿರ್ತಾರೆ. ಇದೀಗ ಅಂತದ್ದೆ ಮತ್ತಿಬ್ಬರು ಪ್ರಮುಖ ವ್ಯಕ್ತಿಗಳ ಬಗ್ಗೆ ಸಮಂತ ಬರೆದುಕೊಂಡಿದ್ದಾರೆ.
ನಾಗಚೈತನ್ಯರಿಂದ ದೂರವಾಗಿರೋ ಸಮಂತ ಸಂಪೂರ್ಣವಾಗಿ ಬದಲಾಗಿದ್ದಾರೆ. ಸಿನಿಮಾದಲ್ಲಿ ಹೆಚ್ಚು ಹೆಚ್ಚು ಬೋಲ್ಡ್ ಆಗಿ ಕಾಣಿಸಿಕೊಳ್ತಿರುವ ನಟಿ ಸ್ನೇಹಿತರ ಜೊತೆ ನಾನಾ ದೇಶಗಳನ್ನ ಸುತ್ತಾಡ್ತಿದ್ದಾರೆ. ಇದೀಗ ಸಮಂತ ಸ್ವಿಜರ್ ಲ್ಯಾಂಡ್ ಗೆ ತೆರಳಿದ್ದು ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ.
ಚಳಿಗಾಲದ ಸಮಯವಾಗಿರೋದ್ರಿಂದ ಸ್ವಿಜರ್ ಲ್ಯಾಂಡ್ ಸಂಪೂರ್ಣವಾಗಿ ಹಿಮದಿಂದ ಕೂಡಿದೆ. ಹಿಮದಿಂದ ಈ ದೇಶದ ಸೌಂದರ್ಯ ಮತ್ತಷ್ಟು ಹೆಚ್ಚಿದ್ದು ಇಲ್ಲಿನ ಪೋಟೋಗಳನ್ನ ಸಮಂತ ಹಂಚಿಕೊಳ್ತಿದ್ದಾರೆ. ಜೊತೆಗೆ ಹಿಮದಲ್ಲಿ ಸ್ಕೀಯಿಂಗ್ ಮಾಡೋಕೆ ಪ್ರಯತ್ನಿಸಿದ್ದಾರೆ. ನಟಿ ಅದರ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದುಇದಕ್ಕೆ ತರಬೇತಿ ನೀಡಿದವರನ್ನ ಅವರು ನೆನಪಿಸಿಕೊಂಡಿದ್ದಾರೆ.
ಇನ್ ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಮಂತ ಇವರಿಂದಾಗಿ ನಾನು ಬದುಕಿದ್ದೇನೆ ಎಂದು ಸ್ಕೀ ತರಬೇತುದಾರರಾದ ಕೇಟ್ ಹಾಗೂ ಆ್ಯಂಟೋನಿ ಅವರನ್ನ ಟ್ಯಾಗ್ ಮಾಡಿದ್ದಾರೆ.




