ಮನರಂಜನೆಸಿನಿಮಾಸೆಲೆಬ್ರಿಟಿ

ಮಗಳಿಗೆ ಕನ್ನಡ ಪಾಠ ಮಾಡೋದ್ರಲ್ಲಿ ಬ್ಯುಸಿಯಾದ ರಾಕಿಂಗ್ ಸ್ಟಾರ್

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರೋ ನಟಿ ರಾಧಿಕಾ ಪಂಡಿತ್ ಆಗಾಗ ತಮ್ಮ ಫೋಟೋಗಳನ್ನ ಶೇರ್ ಮಾಡ್ತಾ ಇರ್ತಾರೆ. ಇದೀಗ ರಾಧಿಕಾ ಹೊಸ ವಿಡಿಯೋವೊಂದನ್ನ ಶೇರ್ ಮಾಡಿದ್ದು ವೀಡಿಯೋ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಮನೆಯೇ ಮೊದಲ ಪಾಠ ಶಾಲೆ ಅನ್ನೋ ಮಾತು ಅಕ್ಷರಶಃ ಸತ್ಯ. ಇದು ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲ ಸೆಲೆಬ್ರಿಟಿಗಳ ವಿಚಾರದಲ್ಲೂ ಈ ಮಾತು ಸತ್ಯ. ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿ ಕೂಡ ಇದಕ್ಕೆ ಹೊರತಾಗಿಲ್ಲ.

ರಾಕಿಂಗ್ ಸ್ಟಾರ್ ದಂಪತಿ ಪುತ್ರಿ ಮಗಳು ಈಗ ಮೂರು ವರ್ಷ. ಇನ್ನೆನ್ನೂ ಸ್ವಲ್ಪ ಸಮಯದಲ್ಲೇ ಆರ್ಯಾ ಸ್ಕೂಲಿಗೆ ಹೋಗೋ ತಯಾರಿಯಲ್ಲಿದ್ದಾಳೆ. ಹೀಗಾಗಿ ಯಶ್ ಮಗಳಿಗೆ ಅಕ್ಷರಾಭ್ಯಾಸ ಶುರು ಮಾಡಿದ್ದಾರೆ. ಮನೆಯಲ್ಲಿ ಯಶ್ ಆರ್ಯಗೆ ಕನ್ನಡ ವರ್ಣಮಾಲೆ ಹೇಳಿಕೊಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ವೀಕೆಂಡ್ ನಲ್ಲಿ ಯಶ್ ಸಿನಿಮಾದ ಯಾವುದೇ ಕೆಲಸದಲ್ಲೂ ಭಾಗಿಯಾಗಿಲ್ಲ. ಮಗಳಿಗೆ ಅಆಇಈ ಹೇಳಿಕೊಡೋದ್ರಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಈ ವಿಡಿಯೋವನ್ನ ಹಂಚಿಕೊಂಡಿರುವ ರಾಧಿಕಾ ಪಂಡಿತ್ ವೀಕೆಂಡ್ ಸ್ಪೆಷಲ್ ಕ್ಲಾಸ್ ಎಂದು ಕ್ಯಾಪ್ಷನ್ ನಲ್ಲಿ ಬರೆದುಕೊಂಡಿದ್ದಾರೆ.

ಈಗಾಗ್ಲೆ ಕನ್ನಡದ ವರ್ಣಮಾಲೆಯ ಸ್ವರಗಳನ್ನ ಆರ್ಯಾ ಕಲಿತಿದ್ದು ವ್ಯಂಜನಗಳನ್ನ ಕಲಿಯುವುದು ಮಾತ್ರ ಭಾಕಿ ಇದೆ ಅನ್ನೋದು ವಿಡಿಯೋದಲ್ಲಿ ಗೊತ್ತಾಗುತ್ತೆ, ಒಟ್ಟಿನಲ್ಲಿ ಯಶ್ ಸಿನಿಮಾದ ಕೆಲಸದ ನಡುವೆಯೂ ಫ್ರಿ ಮಾಡಿಕೊಂಡು ಮಕ್ಕಳಿಗೆ ಪಾಠ ಹೇಳಿಕೊಡೋದ್ರಲ್ಲಿ ಬ್ಯುಸಿಯಾಗಿದ್ದಾರೆ,

Spread the love

Related Articles

Leave a Reply

Your email address will not be published. Required fields are marked *

Back to top button