ಸಿನಿಮಾಸೆಲೆಬ್ರಿಟಿ

ಜೈ ಆಂಜನೇಯ ಎಂದ ಅರ್ಜುನ್!

ಪೂರ್ಣ ವಿ-ರಾಮ

ಅರ್ಜುನ್ ಸರ್ಜಾ ಅದೆಷ್ಟೋ ವರುಷಗಳ ಕನಸು ಇದೀಗ ನನಸಾಗಿದೆ. ಆಂಜನೇಯ ಟೆಂಪಲ್ ನಿರ್ಮಾಣ ಕಾರ್ಯ ಇದೀಗ ಪೂರ್ಣಗೊಂಡಿದ್ದು, ಆ ಖುಷಿ ಸುದ್ದಿಯನ್ನು ಖುದ್ದು ಅರ್ಜುನ್ ಸರ್ಜಾ ಹಂಚಿಕೊಂಡಿದ್ದಾರೆ. ಇದೇ ಜುಲೈ ಒಂದು ಎರಡರಂದು ಆ ದೇವಾಲಯದ ಕುಂಬಾಭಿಷೇಕ ಕಾರ್ಯಕ್ರಮವನ್ನ ಅವರು ಚೆನ್ನೈನಲ್ಲಿ ಹಮ್ಮಿಕೊಂಡಿದ್ದಾರೆ.

ಕೋವಿರ್ ಕಾರಣಕ್ಕೆ ಬರೀ ಲೈವ್!
ಈ ಮಹಾ ಸಮಾರಂಭದ ಸಂಭ್ರಮಕ್ಕೆ ಭಕ್ತಾದಿಗಳು ಮತ್ತು ಅಭಿಮಾನಿಗಳನ್ನು ಆಹ್ವಾನ ಮಾಡಬೇಕೆಂದಿತ್ತು. ಆದರೆ ಕೋವಿಡ್ ೧೯ ಕಾರಣಕ್ಕೆ ಅದು ಸಾಧ್ಯ ಆಗುತ್ತಿಲ್ಲ. ಆದ್ದರಿಂದ ಆ ದಿನದ ಕುಂಬಾಭಿಷೇಕ ಕಾರ್ಯಕ್ರಮವನ್ನು ಎಲ್ಲರೂ ಲೈವ್ ಸ್ಟ್ರೀಮ್ ನಲ್ಲಿ ವೀಕ್ಷಿಸಬಹುದು ಎಂದಿದ್ದಾರೆ ಅರ್ಜನ್ ಸರ್ಜಾ ಎಂಬ ಪರಮ ಹನುಮ ಭಕ್ತ.

ಚಿರು ಇಲ್ಲ ಎಂಬ ನೋವು ಅಜ್ಜು ಮೊಗದಲ್ಲಿ!
ಈ ಕುರಿತು ಫೇಸ್ ಬುಕ್ ವೀಡಿಯೋ ಮಾಡಿ ಹಾಕಿರುವ ಅರ್ಜುನ್ ಸರ್ಜಾ ಕಣ್ಣಲ್ಲಿ ಆಂಜನೇಯನ ಗುಡಿ ನಿರ್ಮಾಣವಾದ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಇಲ್ಲವಲ್ಲ ಎಂಬ ಸಂಕಟ ಎದ್ದು ಕಾಣುತ್ತಿದೆ. ಚಿರು ಇದ್ದಿದ್ದರೆ ಖಂಡಿತ ಖುಷಿ ಪಡುತ್ತಿದ್ದ ಎಂಬ ನೋವು ಅವ್ಯಕ್ತ ರೂಪದಲ್ಲಿ ಅಡಗಿರುವುದು ಗೊತ್ತಾಗುತ್ತಿದೆ. ಅದೇನೇ ಇದ್ದರೂ ಅರ್ಜುನ್ ಅವರಿಗೆ ಮೊದಲಿಂದ ಹನುಮಂತ ಅಂದರೆ ಹತ್ತಿರದ ಪ್ರೀತಿ. ನಟ ಧ್ರುವ ಸರ್ಜಾ ಅವರಿಗೂ ಸೇಮ್ ಡೈಲಾಗ್!

Spread the love

Related Articles

Leave a Reply

Your email address will not be published. Required fields are marked *

Back to top button