ನಟಿ ಖುಷ್ಬೂ ಟ್ವೀಟರ್ ಖಾತೆ ಹ್ಯಾಕ್ !

ನಟಿ, ರಾಜಕಾರಣಿ ಖುಷ್ಬು ಅವರ ಟ್ವೀಟರ್ ಖಾತೆಯನ್ನು ಒಂದೆರಡು ದಿನಗಳ ಹಿಂದೆ ಹ್ಯಾಕ್ ಮಾಡಲಾಗಿತ್ತು ಎಂಬುದಾಗಿ ತಿಳಿದು ಬಂದಿದೆ. ಹ್ಯಾಕರ್ ಬಳಕೆದಾರರ ಹೆಸರು ಮತ್ತು ಫೋಟೊವನ್ನು ಬದಲಾಯಿಸಿದ್ದಾರೆ. ಮತ್ತು ಅವರ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.
ಖುಷ್ಬೂ ಅವರು ತನ್ನ ಇನ್ ಸ್ಟ್ರಾಗ್ರಾಂ ಖಾತೆಯಲ್ಲಿ ತಮ್ಮ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಿದ ಬಗ್ಗೆ ಪತ್ರ ಪೋಸ್ಟ್ ಮಾಡುವುದರ ಈ ಬಗ್ಗೆ ಮಾಹಿತಿ ನೀಡಿದ್ದಾರೆ. “ನನ್ನ ಟ್ವಿಟರ್ ಖಾತೆಯನ್ನು ಮೂರು ದಿನಗಳ ಹಿಂದೆ ಹ್ಯಾಕ್ ಮಾಡಲಾಗಿದೆ ಎಂದು ನಿಮಗೆ ತಿಳಿಸುತ್ತೇನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಟ್ವಿಟರ್ ಆಡಳಿತ ಕಚೇರಿಯನ್ನು ಸಂಪರ್ಕಿಸಲಾಗಿದೆ. ಕಳೆದ ಕೆಲವು ದಿನಗಳಲ್ಲಿ ಈ ಖಾತೆಯಿಂದ ಮಾಡಲಾದ ಯಾವುದೇ ಚಟುವಟಿಕೆ ಮತ್ತು ಟ್ವೀಟ್ ನನ್ನದಲ್ಲ” ಎಂದು ತಿಳಿಸಿದ್ದಾರೆ.
ಅಲ್ಲದೇ ಹ್ಯಾಕರ್ ನನ್ನ ಐಡಿ ಮತ್ತು ಡಿಪಿಯನ್ನು ಬದಲಿಸಿದ್ದರೂ ಇನ್ನು ಪ್ರವೇಶಿಸಲಾಗಿಲ್ಲ. ಹ್ಯಾಂಕರ್ ಈಗ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬುದು ನನ್ನ ಚಿಂತೆ. ನಾನು ಟ್ವೀಟರ್ ಗೆ ಹಿಂತಿರುಗಿದ್ದೇನೆ ಎಂದು ಘೋಷಿಸುವವರೆಗೂ ನನ್ನ ಖಾತೆಯ ಯಾವುದೇ ಸಂದೇಶವನ್ನು ನಂಬಬೇಡಿ ಎಂದು ತಿಳಿಸಿದ್ದಾರೆ.
