Breaking Newsಮನರಂಜನೆಸಿನಿಮಾಸೆಲೆಬ್ರಿಟಿ

ಧನುಷ್ ಅಭಿಮಾನಿಗಳ ಬಗ್ಗೆ ಅಸಮಾಧಾನಗೊಂಡ ಸಂಗೀತ ನಿರ್ದೇಶಕ ಸೀನ್ ರೋಲ್ಡಾನ್

ಸಂಗೀತ ಸಂಯೋಜಕ ಮತ್ತು ಗಾಯಕ ಸೀನ್ ರೋಲ್ಡಾನ್ ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಅದರಲ್ಲಿ ಸಂಗೀತದ ಬಗ್ಗೆ ಮಾತ್ರವಲ್ಲದೇ ವಿವಿಧ ವಿಷಯಗಳ ಬಗ್ಗೆ ಹೃದಯಬಿಚ್ಚಿ ಮಾತನಾಡುತ್ತಾರೆ. ಇದೀಗ ಅವರು ನಟ ಧನುಷ್ ಅಭಿಮಾನಿಗಳ ಬಗ್ಗೆ ಅಸಮಾಧಾನಗೊಂಡಿರುವುದಾಗಿ ತಿಳಿಸಿದ್ದಾರೆ.

ನಟ ಧನುಷ್ ಮತ್ತು ಗಾಯಕ ಸೀನ್ ರೋಲ್ಡಾನ್ ಯಾವಾಗಲೂ ಜೊತೆಯಾಗಿರುತ್ತಾರೆ. ವೇಲೈ ಇಲಾ ಪಟ್ಟಾಧರಿ 2 ಮತ್ತು ಧನುಷ್ ನಿರ್ದೇಶನದ ಪಾ.ಪಾಂಡಿ ಚಿತ್ರಕ್ಕೂ ಇವರೇ ಸಂಗೀತ ನಿರ್ದೇಶನ ಮಾಡಿದ್ದಾರೆ. ಪಾ.ಪಾಂಡಿ ಚಿತ್ರದ ಹಾಡುಗಳನ್ನು ಅವರ ಅಭಿಮಾನಿಗಳು ಮೆಚ್ಚಿ ಶ್ಲಾಘಿಸಿದ್ದರು.

ಆದರೆ ಇದೀಗ ವಿಐಪಿ 2 ಚಿತ್ರದ ಸಂಗೀತವನ್ನು ಧನುಷ್ ಅಭಿಮಾನಿಗಳು ಮೆಚ್ಚಲಿಲ್ಲ. ಬದಲಾಗಿ ಟೀಕೆಗಳನ್ನು ಮಾಡಿದ್ದಾರೆ. ಅವರ ಯೋಜನೆಗಳಿಂದ ಹೊರಗುಳಿಯುವಂತೆ ಕೇಳಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟರ್ ನಲ್ಲಿ ಸ್ಪಷ್ಟನೆ ನೀಡಿದ ಸೀನ್ ಅವರು, ವಿಐಪಿ 2 ಚಿತ್ರ ಮುಗಿಸಲು ನನಗೆ ಕೇವಲ 3 ದಿನಗಳನ್ನು ಮಾತ್ರ ನೀಡಲಾಗಿತ್ತು. ಹಾಗಾಗಿ ಉತ್ತಮವಾಗಿ ಕೆಲಸ ಮಾಡಲು ಆಗಲಿಲ್ಲ. ಹಾಗಾಗಿ ಧನುಷ್ ಜೊತೆ ಭವಿಷ್ಯದಲ್ಲಿ ಉತ್ತಮ ಯೋಜನೆಗಳನ್ನು ಮಾಡುತ್ತೇನೆ. ಅದಕ್ಕೆ ನಿಮ್ಮ ಬೆಂಬಲ ಮತ್ತು ಪ್ರೀತಿ ನೀಡಿ ಎಂದು ಕೇಳಿಕೊಂಡಿದ್ದಾರೆ

Spread the love

Related Articles

Leave a Reply

Your email address will not be published. Required fields are marked *

Back to top button