ಮನರಂಜನೆಸಿನಿಮಾಸೆಲೆಬ್ರಿಟಿ

ರಾಮಚಾರಿಗಾಗಿ ಕಿರುತೆರೆಗೆ ಬಂದ ಭಾವನಾ

ಸಿನಿಮಾದಲ್ಲಿ ನಟಿಸಿದ ಕಲಾವಿದರು ಕಿರುತೆರೆಗೆ ಬರೋದು ಹೊಸದೇನಲ್ಲ. ಈಗಾಗ್ಲೆ ಸಿನಿಮಾ ರಂಗದಲ್ಲಿ ಹೆಸ್ರು ಮಾಡಿರೋ ಸಾಕಷ್ಟು ಕಲಾವಿದರು ಬೆಳ್ಳಿ ಪರದೆಯ ಮೇಲೂ ಮಿಂಚುತ್ತಿದ್ದಾರೆ, ಆ ಸಾಲಿಗೆ ಇದೀಗ ನಟಿ ಭಾವನ ರಾಮಣ್ಣ ಸೇರ್ಪಡೆಯಾಗಿದ್ದು ಹೊಸ ಧಾರವಾಹಿ ಮೂಲಕ ಫುಲ್ ಪ್ಲೆಜ್ಡ್ ಆಗಿ ನಿಮ್ಮ ಮನೆ ಮನೆಗೆ ಬರೋಕೆ ಸಿದ್ದವಾಗಿದ್ದಾರೆ.

ಕಿರುತೆರೆಗೆ ಆಗಾಗ ಬಂದು ಹೋಗುತ್ತಿದ್ದ ನಟಿ ಭಾವನ ರಾಮಣ್ಣ ಇನ್ಮುಂದೆ ನಿಮ್ಮ ಮನೆ ಟಿವಿ ಗಳಲ್ಲಿ ನಿತ್ಯ ಕಾಣಿಸಿಕೊಳ್ಳಲಿದ್ದಾರೆ. ಕೆ.ಎಸ್.ರಾಮ್ ಜೀ ನಿರ್ದೇಶನದಲ್ಲಿ ಹಾಗೂ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಧಾರವಾಹಿ ರಾಮಚಾರಿ ಮೂಲಕ ಭಾವನ ಕಿರುತೆರೆಗೆ ಫುಲ್ ಪ್ಲೆಜ್ಡ್ ಆಗಿ ಎಂಟ್ರಿಕೊಡ್ತಿದ್ದಾರೆ.

ಇದುವರೆಗೂ ಹೆಚ್ಚಾಗಿ ಸಾಕಷ್ಟು ತೂಕವಿರುವ ಪಾತ್ರಗಳಲ್ಲೇ ಕಾಣಿಸಿಕೊಳ್ತಿದ್ದ ಭಾವನ ಇಲ್ಲೂ ಅಂಥದ್ದೇ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಕೇವಲ ಅತಿಥಿ ಪಾತ್ರಗಳಲ್ಲಿಯೇ ನಟಿಸ್ತಿದ್ದ ಭಾವನ ಈ ಪಾತ್ರ ಸಾಕಷ್ಟು ವಿಶೇಷವಾಗಿರೋದ್ರಿಂದ ರಾಮಚಾರಿ ಧಾರವಾಹಿಯಲ್ಲಿ ಸಂಪೂರ್ಣವಾಗಿ ತಮ್ಮನ್ನ ತಾವು ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.

ರಾಮಚಾರಿ ಧಾರವಾಹಿಯಲ್ಲಿ ಭಾವನ ಬಾಸ್ ಪಾತ್ರದ ಮೂಲಕ ವೀಕ್ಷಕರನ್ನ ರಂಜಿಸಲು ರೆಡಿಯಾಗಿದ್ದಾರೆ. ನಾನು ಹೇಳಿದ್ದೆ ಸರಿ, ನನ್ನ ಮಾತೆ ಅಂತಿಮ ಎನ್ನುವ ದರ್ಪದ ಬಾಸ್ ಪಾತ್ರವನ್ನ ಭಾವನ ಮಾಡಲಿದ್ದಾರಂತೆ.

ಈಗಾಗ್ಲೆ ಸಾಕಷ್ಟು ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರುವ ರಾಮಚಾರಿ ಧಾರವಾಹಿ ಯಾವಾಗ ಶುರುವಾಗುತ್ತೆ? ಭಾವನ ಪಾತ್ರ ಹೇಗಿರುತ್ತೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button