Latestರಾಷ್ಟ್ರೀಯ

ದೇಶದಲ್ಲಿ 3.47 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆ

ದೆಹಲಿ: ದೇಶದಲ್ಲಿ ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. 24 ಗಂಟೆ ಅವಧಿಯಲ್ಲಿ 3.47 ಲಕ್ಷ ಕೋವಿಡ್ 19 ಪ್ರಕರಣಗಳು ದೃಢಪಟ್ಟಿದ್ದು, 703 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ .

ಇದರೊಂದಿಗೆ, ಸಕ್ರಿಯ ಪ್ರಕರಣಗಳ ಸಂಖ್ಯೆ 20,18,825ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವ್ ಪ್ರಮಾಣ ಸದ್ಯ ಶೇ 17.94ರಷ್ಟಿದೆ.

ಈವರೆಗೆ 9,692 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಗುರುವಾರಕ್ಕೆ ಹೋಲಿಸಿದರೆ ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಶುಕ್ರವಾರ ಶೇ 4.36ರ ಹೆಚ್ಚಳ ಕಂಡುಬಂದಿದೆ.

ಈ ಮಧ್ಯೆ, 6.5 ಕೋಟಿ ಜನ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದಿಲ್ಲ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಎರಡನೇ ಡೋಸ್ ತೆಗೆದುಕೊಳ್ಳಲು ಬಾಕಿ ಇರುವವರು ಅದನ್ನು ಪಡೆಯುವಂತೆ ಸಲಹೆ ನೀಡಿದೆ.ರೆ.

ಇನ್ನು ಕೇರಳದಲ್ಲಿ ಕೊರೋನಾ ವೈರಸ್ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 50,000 ಪ್ರಕರಣಗಳು ಪತ್ತೆಯಾಗಿವೆ. ದೈನಂದಿನ ಪ್ರಕರಣಗಳ ಪೈಕಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳ ದಾಖಲಾಗಿರುವುದು ತಿಳಿದುಬಂದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button