ಉಡುಪಿಜಿಲ್ಲಾ ಸುದ್ದಿ

ರಸ್ತೆಯಲ್ಲೇ ವಾಹನ ಪಾರ್ಕಿಂಗ್, ಸೆಟ್ ಬ್ಯಾಕ್ ನಲ್ಲೇ ಕಟ್ಟಡ ವಿಸ್ತರಣೆ; ಹೇಳೋರಿಲ್ಲ, ಕೇಳೋರಿಲ್ಲ!

ಉಡುಪಿ: ಧಾರ್ಮಿಕ ಕ್ಷೇತ್ರಗಳ ತವರು, ಪ್ರವಾಸಿ ತಾಣಗಳ ನೆಲೆವೀಡು ಉಡುಪಿಯಲ್ಲಿ ಎಲ್ಲೆಂದರಲ್ಲಿ ವಾಹನ‌ ಪಾರ್ಕ್ ಮಾಡುವುದು, ವಾಣಿಜ್ಯ ಮಳಿಗೆಯವರು ಪಾರ್ಕಿಂಗ್ ಗೆ ಜಾಗ ಮೀಸಲಿಡದೆ ಸೆಟ್ ಬ್ಯಾಕ್ ಪ್ರದೇಶದಲ್ಲೇ ತಮ್ಮ ಕಟ್ಟಡ ಕಟ್ಟಿ ಕಾರ್ಯಾಚರಣೆ ನಡೆಸುವುದು‌ ಮಾಮೂಲಾಗಿದೆ.

ಮೊದಲೇ ಪ್ರವಾಸಿಗರಿಂದ ತುಂಬಿ ಹೋಗಿರುವ ನಗರದಲ್ಲಿ ಇದು ತೀರಾ ಅವ್ಯವಸ್ಥೆಗೆ ಕಾರಣವಾಗಿದ್ದು, ವಾಹನ ಸವಾರರು, ಪಾದಚಾರಿಗಳು ಪರದಾಡಬೇಕಾಗಿದೆ.

ನಗರದ ಸಿಟಿ ಸೆಂಟರ್ ನ ಬೃಹತ್ ವಾಣಿಜ್ಯ ಸಂಕೀರ್ಣಕ್ಕೆ ತಾಗಿಕೊಂಡಿರುವ ರಸ್ತೆ ಬದಿ ಖಾಸಗಿಯವರು ದಂಡೆ ಕಟ್ಟಿರುವುದು, ಗೂಡಂಗಡಿ ಠಿಕಾಣಿ, ಗ್ರಾಹಕರು ರಸ್ತೆಯಲ್ಲೇ ವಾಹನ ಪಾರ್ಕ್ ಮಾಡುವುದು ಸಾಮಾನ್ಯವಾಗಿದೆ.

ಗ್ರಾಹಕರಿಗೆ ವಾಣಿಜ್ಯ ಕೇಂದ್ರದವರೇ ಪಾರ್ಕಿಂಗ್ ಸ್ಥಳ ಒದಗಿಸಬೇಕೆನ್ನುವ ನಿಯಮವಿದೆ. ಆದರೆ, ಇಲ್ಲಿ ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ಇದು ಸರ್ವಿಸ್ ಬಸ್ ನಿಲ್ದಾಣ ಸಂಪರ್ಕಿಸುವ ಮುಖ್ಯ ರಸ್ತೆಯಾಗಿದ್ದು, ಈ ರಸ್ತೆ ಕಿರಿದಾಗಿರುವುದರಿಂದ ವಾಹನ ಸಂಚರಿಸಲು ತೊಂದರೆ ಉಂಟಾಗುತ್ತಿದೆ.

ಇನ್ನು ನಗರಸಭೆ ಕಚೇರಿ ಮುಂಭಾಗ ಹಾದುಹೋಗುವ, ಕವಿ ಮುದ್ದಣ ರಸ್ತೆಯಲ್ಲೂ ವಾಹನಗಳನ್ನು‌ ಪಾರ್ಕ್ ಮಾಡಲಾಗುತ್ತಿದೆ. ಬಡಗುಪೇಟೆಯಲ್ಲೂ ಈ ದೃಶ್ಯ ಸಾಮಾನ್ಯ. ನಗರಸಭೆ ಎದುರೇ ಈ ರೀತಿ ಅವ್ಯವಸ್ಥೆ ನಗರವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button