ಉತ್ತರ ಕನ್ನಡಜಿಲ್ಲಾ ಸುದ್ದಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಸಹ ಮಳೆಯ ಆರ್ಭಟ ಮುಂದುವರೆದಿದೆ. ಬೆಳಗ್ಗಿನಿಂದ ಕರಾವಳಿ ಭಾಗದಲ್ಲಿ ಅಲ್ಪ ಬಿಡುವು ಕೊಟ್ಟಿದ್ದ ಮಳೆ ಮಧ್ಯಾಹ್ನದ ಹೊತ್ತಿನಲ್ಲಿ ತನ್ನ ತೀವ್ರತೆ ಹೆಚ್ಚಿಸಿಕೊಂಡಿದೆ.
ಕರಾವಳಿ ಭಾಗದ ಹೊನ್ನಾವರದಲ್ಲಿ ಕಳೆದ 24 ಘಂಟೆಯಲ್ಲಿ 90.3ಮಿಲೀ ಮೀಟರ್ ಮಳೆಯಾದರೆ ಭಟ್ಕಳ – 66,ಹಳಿಯಾಳ – 9.0, ಮುಂಡಗೋಡು – 9.2 ,ಜೋಯಿಡಾ – 11.0, ಕಾರವಾರ – 40.9,ಯಲ್ಲಾಪುರ – 5.2, ಕುಮಟಾ – 61.8,ಅಂಕೋಲಾ – 44.6 ಮಿಲೀ ಮೀಟರ್ ಮಳೆಯಾದರೆ ಮಲೆನಾಡು ಭಾಗದ ಶಿರಸಿ,ಸಿದ್ದಾಪುರ ಹಾಗೂ ಘಟ್ಟ ಭಾಗದಲ್ಲೂ ಸಹ ಹೆಚ್ಚಿನ ಮಳೆಯಾಗುತ್ತಿದ್ದು,ಸಿದ್ದಾಪುರದಲ್ಲಿ 31.0 ,ಶಿರಸಿ – 27.5 ಮಿಲೀ ಮೀಟರ್ ಮಳೆಯಾಗಿದೆ.
ಜಿಲ್ಲೆಯಲ್ಲಿ ಇನ್ನು ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಜಿಲ್ಲೆಯಾದ್ಯಂತ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.




