ಉತ್ತರ ಕನ್ನಡ
ಲಾರಿಯಲ್ಲಿ ಸಾಗಿಸುತ್ತಿದ್ದ ಮದ್ಯ ವಶ; ಆರೋಪಿ ಬಂಧನ

ಕಾರವಾರ : ಜೊಯ್ಡಾ ತಾಲೂಕಿನ ಅನಮೋಡ ಗ್ರಾಮದ ಅಬಕಾರಿ ತನಿಖಾ ಠಾಣೆಯಲ್ಲಿ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಗೋವಾ ಸಾರಾಯಿ ಹಿಡಿದು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ಗೋವಾ ಮಧ್ಯ ಸಾಗಾಟ ಮಾಡುತ್ತಿದ್ದ ಆರೋಪಿ ಲಾರಿ ಚಾಲಕ ಆಂಧ್ರಪ್ರದೇಶದ ಬಚ್ಚನಬೋಯಿನಾ ಶ್ರೀನಿವಾಸ ಬಾಲಕೊಟ್ಟಯ್ಯ ಈತನನ್ನು ಬಂಧಿಸಿ ಅಶೋಕ ಲೈಲ್ಯಾಂಡ್ ಕಂಪನಿಯ ಲಾರಿ ಮತ್ತು 595 ಲೀಟರ್ ಸಾರಾಯಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವಶಕ್ಕೆ ಪಡೆದ ವಾಹನ ಮತ್ತು ಸಾರಾಯಿ ಒಟ್ಟೂ ಅಂದಾಜು ಮೌಲ್ಯ 42 ಲಕ್ಷದಷ್ಟಾಗಿದೆ ಎಂದು ಅಂದಾಜಿಸಲಾಗಿದೆ.




