ಉತ್ತರ ಕನ್ನಡ

ಲಿಂಗನಮಕ್ಕಿ ಜಲಾಶಯ ಭರ್ತಿ ಹಂತಕ್ಕೆ; ನೀರು ಹೊರಬಿಡುವ ಸೂಚನೆ

ಕಾರವಾರ : ಶರಾವತಿ ನದಿಯಿಂದ ಲಿಂಗನಮಕ್ಕಿ ಜಲಾಶಯಕ್ಕೆ ಹೇರಳ ಪ್ರಮಾಣದ ನೀರು ಹರಿದು ಬರುತ್ತಿದೆ.ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಮೀಟರ ಆಗಿದ್ದು.ಈ ವರೆಗೆ 1806.20 ಮೀಟರ್‌ ತುಂಬಿದೆ.

ಒಳ ಹರಿವಿನ ಪ್ರಮಾಣ ಸುಮಾರು 18552 ಕ್ಯೂಸೆಕ್ಸ್ ಗಳಿದ್ದು,ಹೀಗೆ ನೀರಿನ ಒಳಹರಿವು ಮುಂದುವರಿದರೆ ಆಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಯಾವುದೇ ಸಮಯದಲ್ಲಿ ಹೊರ ಬಿಡಲಾಗುತ್ತದೆ ಎಂದು ಲಿಂಗನಮಕ್ಕಿ ಜಲಾಶಯದ ಕಾರ್ಯನಿರ್ವಾಹಕ ಎಂಜಿನೀಯರ್‌ ಎಚ್ಚರಿಕೆ ನೀಡಿದ್ದಾರೆ.

ಲಿಂಗನಮಕ್ಕಿ ಆಣೆಕಟ್ಟೆಯ ಕೆಳಭಾಗದಲ್ಲಿ ದೋಣಿ ಸಂಚಾರ,ಮೀನುಗಾರರಿಗೆ ಮತ್ತು ಇತರೆ ಚಟುವಟಿಕೆಗಳನ್ನು ನಡೆಸಬಾರದು.ಆಣೆಕಟ್ಟೆಯ ಕೆಳ ದಂಡೆಯಲ್ಲಿ ಹಾಗೂ ನದಿಯ ದಡದಲ್ಲಿ ವಾಸಿಸುವ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು ಎಂದು ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button