ಬೆಂಗಳೂರು-ಕಾರವಾರ ರೈಲು ಸೇವೆ ಆ.16ರಿಂದ ಪುನರಾರಂಭ

ಕಾರವಾರ: ಸದ್ಯ ಬೆಂಗಳೂರು – ಕಾರವಾರ (YPR-KAWR-06211/12) ಬೆಳಗಿನ ರೈಲು ಇದೇ ಆಗಸ್ಟ್ 16 ರಿಂದ ಹೊಸ ವಿಸ್ಟಾಡೋಮ್ ಕೋಚಿನೊಂದಿಗೆ ಪುನಾರಂಭಗೊಳ್ಳಲಿದೆ.ಕೋವಿಡ್ ಕಾರಣದಿಂದ ಬೆಂಗಳೂರು – ಕಾರವಾರಕ್ಕೆ ಬೆಳಗಿನ ರೈಲು ಸಂಚಾರವನ್ನು ಮಂಗಳೂರಿನಿಂದ ಕಾರವಾರದ ತನಕ ರೈಲ್ವೆ ಇಲಾಖೆ ಸ್ಥಗಿತಗೊಳಿಸಿತ್ತು.
ಕೊರೋನಾ ಹಿನ್ನೆಲೆ ಸಾರಿಗೆ ಸೇವೆಗಳಿಗೆ ಭಾರಿ ಹೊಡೆತ ನೀಡಿತ್ತು.ಅದರಲ್ಲೂ ಬೃಹತ್ ಪ್ರಯಾಣಿಕರನ್ನು ಹೊಂದಿರುವ ರೈಲ್ವೆ ಇಲಾಖೆಯು ಕೋವಿಡ್ ಕಾರಣದಿಂದ ಭಾಗಶಃ ಸಂಚಾರ ಮೊಟಕುಗೊಳಿಸಿತ್ತು.ಲಾಕ್ಡೌನ್ ಕಾರಣಕ್ಕೆ ಹಲವು ರೈಲುಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿತ್ತು.
ಸದ್ಯ ಬೆಂಗಳೂರು – ಕಾರವಾರ (YPR-KAWR-06211/12) ಬೆಳಗಿನ ರೈಲು ಇದೇ ಆಗಸ್ಟ್,16 ರಿಂದ ಹೊಸ ವಿಸ್ಟಾಡೋಮ್ ಕೋಚಿನೊಂದಿಗೆ ಪುನಾರಂಭಗೊಳ್ಳಲಿದೆ.ಈ ಕುರಿತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದ್ದಾರೆ.
ಕೋವಿಡ್ ಕಾರಣದಿಂದ ಬೆಂಗಳೂರು – ಕಾರವಾರಕ್ಕೆ ಬೆಳಗಿನ ರೈಲು ಸಂಚಾರವನ್ನು ಮಂಗಳೂರಿನಿಂದ ಕಾರವಾರದ ತನಕ ರೈಲ್ವೆ ಇಲಾಖೆ ಸ್ಥಗಿತಗೊಳಿಸಿತ್ತು. ಈ ಸಂಬಂಧ ಆಯಾ ಭಾಗದ ಪ್ರಯಾಣಿಕರು, ಸಾರ್ವಜನಿಕರಿಂದ ರೈಲನ್ನು ಪುನರಾರಂಭಿಸುವಂತೆ ಒತ್ತಾಯ ಕೇಳಿಬಂದಿತ್ತು.
ಈ ನಿಟ್ಟಿನಲ್ಲಿ ತಕ್ಷಣ ಎಚ್ಚೆತ್ತ ಸಂಸದೆ ಶೋಭಾ ಕರಂದ್ಲಾಜೆ,ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಕಾರವಾರ – ಬೆಂಗಳೂರು ಹಗಲು ರೈಲನ್ನು ಪುನರಾರಂಭಿಸುವಂತೆ ಮನವಿ ಮಾಡಿದರು.ಇದೀಗ ಸಚಿವರ ಮನವಿಯನ್ನು ಒಪ್ಪಿ,ರೈಲ್ವೆ ಇಲಾಖೆ ಕಾರವಾರ – ಬೆಂಗಳೂರು ಬೆಳಗಿನ ರೈಲನ್ನು ಪುನರಾರಂಭಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ಈ ಕಾರಣದಿಂದ ನೈಋತ್ಯ ರೈಲ್ವೆಯಿಂದ ಬೆಂಗಳೂರು – ಕಾರವಾರ ರೈಲನ್ನು ಪುನರಾರಂಭಿಸಲಾಗುತ್ತಿದೆ.ಇದೇ ವೇಳೆ ಒಂದು ಹೊಸ ವಿಸ್ಟಾಡೋಮ್ ಕೋಚ್ ಕೂಡ ಈ ರೈಲಿಗೆ ಜೊತೆಗೊಳ್ಳಲಿದೆ.




