ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಅನ್​​​ಲಾಕ್​​​​​ 3.0 : ವಾಣಿಜ್ಯನಗರಿ ಹುಬ್ಬಳ್ಳಿಯ ಸಿದ್ದಾರೂಢರ ದರ್ಶನಕ್ಕೆ ಅವಕಾಶ

ಧಾರವಾಡ : ಕೊರೊನಾ ಹಿನ್ನಲೆಯಲ್ಲಿ ಕಳೆದ ಸುಮಾರು ಎರಡುವರೇ ತಿಂಗಳಿಂದ ಸಂಪೂರ್ಣ ಲಾಕ್ ಆಗಿದ್ದ ದೇವಸ್ಥಾನಗಳಿಗೆ, ಇಂದಿನಿಂದ ರಾಜ್ಯ ಸರ್ಕಾರ ಅನ್ ಲಾಕ್ 3.0 ಘೋಷಣೆ ಮೂಲಕ ಸಡಿಲಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹಾಗೂ ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಒಂದಾದ ಜಗದ್ಗುರು ಸಿದ್ದಾರೂಢರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಕಳೆದ ದಿನ ತಡ ಸಂಜೆಯೇ ಮಠದ ಆವರಣದಲ್ಲಿ ಸ್ವಚ್ಚತಾ ಹಾಗೂ ಮುಂಜಾಗ್ರ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇಂದು ಮುಂಜಾನೆ ಎರಡವರೇ ತಿಂಗಳ ಬಳಿಕ ಮೊದಲ ಪೂಜೆಯನ್ನು ದೇವಸ್ಥಾನ ಆಡಳಿತ ಕಮಿಟಿ ವತಿಯಿಂದ ನಡೆಸಲಾಯಿತು. ಇನ್ನೂ ಸಾರ್ವಜನಿಕರು ಕೂಡಾ ಮುಂಜಾನೆ ಇಂದಲೇ ಸಿದ್ದಾರೂಢರ ದರ್ಶನಕ್ಕೆ ಆಗಮಿಸುತ್ತಿದ್ದು, ಸಿದ್ದಾರೂಢರ ದರ್ಶನಕ್ಕೆ ಸರತಿಸಾಲಿನಲ್ಲಿ ನಿಂತುಕೊಂಡು ಭಕ್ತರು ದರ್ಶನ ಪಡೆದುಕೊಳ್ಳುತ್ತಿದ್ದಾರೆ.

ಅಲ್ಲದೆ ದೇವಸ್ಥಾನಗಳಿಗೆ 3.0 ಅನ್ ಲಾಕ್ ಮೂಲಕ ಸಾರ್ವಜನಿಕರ ದರ್ಶಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಮಠದಕಡೆ ಸಿದ್ದಾರೂಢರ ಭಕ್ತರು ಹರಿದು ಬರುತ್ತಿದ್ದು, ದೇವಸ್ಥಾನ ಆವರಣದಲ್ಲಿ ಸಾರ್ವಜನಿಕರು ಅಗರ ಬತ್ತಿ, ಸೇರಿದಂತೆ ಕರ್ಪುರ ಹಚ್ಚಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿದವು.

ಇನ್ನೂ ವಾಣಿಜ್ಯ ನಗರಿಯ ಮೂರು ಸಾವಿರ ಮಠ ಸೇರಿದಂತೆ, ಬಹುತೇಕ ದೇಸ್ಥಾನಗಳು ದೇವಸ್ಥಾನಗಳಲ್ಲಿ ಇಂದಿನಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಸ್ಥಳಿಯ ದೇವಸ್ಥಾನಗಳಿಗೂ ತೆರಳಿ ಸಾರ್ವಜನಿಕರು ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

ಅಲ್ಲದೆ ದೇವಸ್ಥಾನಗಳಲ್ಲಿ ಸಾರ್ವಜನಿಕರು ವಿಶೇಷ ಪೂಜೆಗೆ, ಆರತಿ ಹಾಗೂ ಮೂರ್ತಿ ಮುಟ್ಟುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಆದರೂ ಕೇಲವು ಭಕ್ತರು ದೇವಸ್ಥಾನದ ಆವರಣದ ಭಾಗದಲ್ಲಿ ತಾವೇ ಪೂಜೆ ಸಲ್ಲಿಸಿಕೊಂಡು ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button