ಎಲ್ಲಾ ಓಕೆ, ಥಿಯೇಟರ್ ಭಾಗ್ಯವಿಲ್ಲ ಯಾಕೆ?

ಪೂರ್ಣ ವಿ-ರಾಮ
ರಾಜ್ಯಾದ್ಯಂತ ಹೆಚ್ಚಿನ ವಿಭಾಗಗಳ ಅನ್ ಲಾಕ್ ಪ್ರಕ್ರಿಯೆ ಇಂದಿನಿಂದ ಜಾರಿಯಾಗಿದ್ದು, ಚಿತ್ರರಂಗಕ್ಕೆ ಮಾತ್ರ ಈ ಬಾರಿಯೂ ಶಾಕ್ ಕೊಟ್ಟಿದೆ ರಾಜ್ಯ ಸರ್ಕಾರ. ಸದ್ಯ ಥಿಯೇಟರ್ ಓಪನ್ ಬಗ್ಗೆ ಮಾತೇ ಬೇಡ ಎಂದಿರುವುದು ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದ ಬೇಸರ ಮತ್ತು ಆತಂಕಕ್ಕೆ ಕಾರಣವಾಗಿದೆ!
ರೆಡಿ ಇದ್ದವು ಕನ್ನಡ ಚಿತ್ರಗಳು!
ಶಿವರಾಜ್ ಕುಮಾರ್ ನಟನೆಯ ಭಜರಂಗಿ ೨, ಸುದೀಪ್ ನಟನೆಯ ಕೋಟಿಗೊಬ್ಬ ೨, ದುನಿಯಾ ವಿಜಯ್ ನಟನೆಯ ಸಲಗ ಸೇರಿದಂತೇ ಒಂದಷ್ಟು ದೊಡ್ಡ ಚಿತ್ರಗಳ ನಿರ್ಮಾಪಕರು ಪ್ಲಾನ್ ಮಾಡಿಕೊಂಡಿದ್ದರು. ಇನ್ನು ಕೆಲ ಮಧ್ಯಮ ಕ್ವಾಲಿಟಿ ಸಿನೆಮಾದ ನಿರ್ಮಾಪಕರು ಸಣ್ಣ ಪ್ರಮಾಣದಲ್ಲಿಯೇ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದ್ದರು. ಇನ್ನು ಕೆಲ ಚಿಕ್ಕಪುಟ್ಟ ನಿರ್ಮಾಪಕರು ಸಿನೆಮಾ ಬಿಡುಗಡೆ ಸಹವಾಸವೇ ಬೇಡ ಎಂದು ಸುಮ್ಮನಾಗಿಬಿಟ್ಟಿದ್ದರು. ಆದರೆ ಯಾವಾಗ ಸರಕಾರ ನೋ ಥಿಯೇಟರ್ ಪ್ಲೀಸ್ ಎಂದುಬಿಡ್ಡಿತೋ ಇಡೀ ಚಿತ್ರರಂಗಕ್ಕೆ ಚಿತ್ರರಂಗ ಶಾಕ್ ಆಗಿಬಿಟ್ಟಿದೆ. ದೇವಾಲಯ, ಬಾರಾಲಯ, ಜಿಮ್ಮಾಲಯ ಎಲ್ಲವೂ ಓಪನ್ ಮಾಡುತ್ತಿರುವಾಗ ಚಿತ್ರಾಲಯಕ್ಕೆ ಯಾಕೆ ಅವಕಾಶ ನೀಡುತ್ತಿಲ್ಲ? ಅರ್ಥವೇ ಆಗುತ್ತಿಲ್ಲ ಎಂದು ತಲೆಯ ಮೇಲೆ ಕೈಹೊತ್ತು ಕೂತಿದೆ ನಿರ್ಮಾಪಕ ವಲಯ!




