ಉಡುಪಿ

ಜುಲೈ 9ರಿಂದ 11ವರೆಗೆ ಕರಾವಳಿಯಲ್ಲಿ ಆರೆಂಜ್ ಅಲರ್ಟ್; ಉತ್ತಮ ಮಳೆಯ ನಿರೀಕ್ಷೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ‌ಕಳೆದ ಒಂದು ವಾರದಿಂದ ವಿರಾಮ ನೀಡಿದ್ದ ಭಾರೀ ಮಳೆ ಇಂದು ಗುಡುಗು ಸಹಿತ ಸುರಿದಿದೆ.‌ ಉಡುಪಿ, ಕಾರ್ಕಳ, ಹೆಬ್ರಿ, ಕುಂದಾಪುರ ಹಲವೆಡೆ ಭಾರೀ ಮಳೆ ಸುರಿದಿದೆ.

ಜಿಲ್ಲೆಯಲ್ಲಿ ನಾಳೆ ಯೆಲ್ಲೋ‌ ಅಲರ್ಟ್ ಹಾಗೂ ಶನಿವಾರ, ಭಾನುವಾರ ಹಾಗೂ ಸೋಮವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಭಾರೀ ಮಳೆಯ ಪರಿಣಾಮ ನಗರದ ಕರಾವಳಿ ಜಂಕ್ಷನ್ ನಲ್ಲಿರುವ ಅಂಡರ್ ಪಾಸ್ ‌ಜಲಾವೃತವಾಗಿದ್ದು, ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ‌ ಮಳೆ‌ ನೀರು ಹರಿಯದೆ ಅವ್ಯವಸ್ಥೆ ‌ಸೃಷ್ಟಿಯಾಗಿದೆ. ಮಂಗಳೂರಿನ ಪಂಪ್​ವೆಲ್​ನಂತೆ ಉಡುಪಿಯ ಕರಾವಳಿಯ ಅಂಡರ್​ಪಾಸ್ ಆಗುತ್ತಾ ಅಂತ ಅಭಿಪ್ರಾಯ ವ್ಯಕ್ತವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button