ಸಂಭ್ರಮದಲ್ಲಿ ಸಿಂಗಲ್ ಸ್ಟ್ರೀನ್ ಥಿಯೇಟರ್ ಮಂದಿ!

ಕೋವಿಡ್ ಕಾರಣಕ್ಕೆ ಇಡೀ ಚಿತ್ರರಂಗ ತತ್ತರಿಸಿಹೋಗಿದೆ. ಅದರಲ್ಲೂ ಚಿತ್ರಮಂದಿರಗಳ ಪರಿಸ್ಥಿತಿಯಂತೂ ಹೇಳತೀರದು. ಅದೇ ಸಿಂಗಲ್ ಸ್ಟ್ರೀನ್ ಚಿತ್ರಮಂದಿರಗಳ ನೆರವಿಗೆ ಧಾವಿಸಿದೆ ಕರ್ನಾಟಕ ಸರ್ಕಾರ. ರಾಜ್ಯದ 630 ಚಿತ್ರಮಂದಿರಗಳ ಆಸ್ತಿ ತೆರಿಗೆಯನ್ನು ಈ ವರ್ಷ ಕಟ್ಟುವ ಅಗತ್ಯವಿಲ್ಲ. ಅದನ್ನು ಸರ್ಕಾರವೇ ಕಟ್ಟಲಿದೆ ಎಂದು ಹೇಳುವ ಮೂಲಕ ಥಿಯೇಟರ್ ಮಾಲೀಕರಿಗೆ ರಿಲೀಸ್ ಸಿಗುವಂತೇ ಮಾಡಿದೆ.
ಬಹುತೇಕ ಬಂದ್ ಆಗಿದ್ದವು!
ಕರೋನಾ ಮಹಾಮಾರಿಯ ರೌದ್ರನರ್ತನಕ್ಕೆ ಇಡೀ ಚಿತ್ರೋದ್ಯಮ ನಲುಗಿಹೋಗಿತ್ತು. ಚಿತ್ರಮಂದಿರಗಳು ಪೂರ್ತಿಯಾಗಿ ಲಾಸ್ ನಲ್ಲಿ ನಡೆದಿದ್ದಲ್ಲೇ ತುಂಬಾ ತಿಂಗಳು ಅದು ಮುಚ್ಚಿದ ಬಾಗಿಲಾಗಿತ್ತು. ಈ ಕುರಿತು ಸಿಂಗಲ್ ಸ್ಟ್ರೀನ್ ಥಿಯೇಟರ್ ಮಾಲೀಕರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಮುಖ್ಯಮಂತ್ರಿಗಳ ಮೊರೆ ಹೋಗಿ, ಸಹಾಯ ಹಸ್ತ ಚಾಚುವಂತೇ ಕೋರಿಕೊಂಡಿದ್ದರು. ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ಸೇರಿದಂತೇ ಇನ್ನಿತರೆ ಶುಲ್ಕವನ್ನು ಭರಿಸುವುದು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು. ಅದಕ್ಕೆ ಸ್ಪಂಧಿಸಿದ ರಾಜ್ಯ ಸರ್ಕಾರ ಒಂಬತ್ತು ಕೋಟಿಯಷ್ಟು ಹಣವನ್ನು ಮನ್ನಾ ಮಾಡಿದ್ದು, ಸದ್ಯ ಏಕಪರದೆ ಚಿತ್ರಮಂದಿರ ಮಾಲೀಕರಿಗೆ ಸದ್ಯದ ಮಟ್ಟಿಗೆ ರಿಲ್ಯಾಕ್ಸ್ ನೀಡಿದೆ!
ಥಿಯೇಟರ್ ಯಾವಾಗ ಓಪನ್ನೋ ಗೊತ್ತಿಲ್ಲ!
ಇನ್ನು ಸಿನೆಮಾಗಳ ಪ್ರದರ್ಶನದ ವಿಷಯದಲ್ಲಿ ಸರ್ಕಾರ ಯಾವುದೇ ರೀತಿಯ ನಿರ್ಧಾರ ಕೈಗೊಂಡಿಲ್ಲ. ಬಾರು-ಹೋಟೆಲ್ ಗಳಿಗೆ ಪರ್ಮಿಷನ್ ಕೊಟ್ಟಿರುವ ಸರ್ಕಾರ ಥಿಯೇಟರ್ ವ್ಯವಸ್ಥೆಗೆ ಯಾವಾಗ ಅಸ್ತು ಎನ್ನುತ್ತದೋ ಗೊತ್ತಿಲ್ಲ. ಈಗಾಗಲೇ ಕೋವಿಡ್ ಕಾರಣಕ್ಕೆ ಇಡೀ ಚಿತ್ರೋದ್ಯಮ ತತ್ತರಿಸಿ ಹೋಗಿದೆ. ಥಿಯೇಟರ್ ನಲ್ಲಿ ಕೆಲಸ ಮಾಡುವ ಕಾಫಿ ಟೀ ಮಾರುವವರು, ಬೈಕ್ ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡುವವರ ಪಾಡಂತೂ ಹೇಳತೀರದು!




