Latestಜಿಲ್ಲಾ ಸುದ್ದಿದಾವಣಗೆರೆರಾಜ್ಯಸುದ್ದಿ

ಚಾಲಕ ನಿದ್ರೆ ಮಂಪರಿಗೆ ಜಾರಿದ್ದೇ ಕಾರಣ, ಏಳು ಮಂದಿ ಮಸಣ…

ದಾವಣಗೆರೆ: ಅವ್ರೆಲ್ಲಾ ನಿದ್ರೆ ಮಾಡುತ್ತಿದ್ದರು. ಚಾಲಕನು ವೇಗವಾಗಿ ಹೊಸಪೇಟೆಗೆ ಹೋಗುವ ಧಾವಂತದಲ್ಲಿದ್ದ. ಬೆಂಗಳೂರಿನಿಂದ ಹೊಸಪೇಟೆಗೆ ಇಂಡಿಕಾ ಕಾರಿನಲ್ಲಿ ಏಳು ಮಂದಿ ಪ್ರಯಾಣ ಮಾಡುತ್ತಿದ್ದರು. ಇನ್ನೆರಡು ಗಂಟೆ ಆಗಿದ್ದರೆ ಅವ್ರೆಲ್ಲಾ ಊರು ಸೇರುತ್ತಿದ್ದರು. ಆದ್ರೆ, ವಿಧಿಯಾಟವೇ ಬೇರೆ ಆಗಿತ್ತು. ಮಕರ ಸಂಕ್ರಮಣ ಹಬ್ಬದ ಸಂಭ್ರಮದಲ್ಲಿ ಮನೆ ಮಂದಿ ಇದ್ದರೆ, ಇಲ್ಲಿ ನಡೆದಿದ್ದೇ ಬೇರೆ.

ಹೌದು. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಾನನಕಟ್ಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದ ಭೀಕರ ಅಪಘಾತದಲ್ಲಿ ಏಳು ಮಂದಿ ಬಲಿಯಾಗಿದ್ದಾರೆ. ಬೆಳ್ಳಂಬೆಳಿಗ್ಗೆ ಆದ ಈ ಅಪಘಾತದಲ್ಲಿ ಆರು ಜನರು ಸ್ಥಳದಲ್ಲಿ ಕೊನೆಯುಸಿರೆಳೆದರೆ, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಚಾಲಕನ ಅಜಾಗರೂಕತೆಯೇ ಈ ದುರ್ಘಟನೆಗೆ ಕಾರಣ. ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದ್ದು, ಚಾಲಕ ನಿದ್ರೆ ಮಂಪರಿಗೆ ಜಾರಿದ ಪರಿಣಾಮ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದಿದೆ. ಕಾರು ಜಖಂ ಆಗಿರುವುದನ್ನು ನೋಡಿದರೆ ಯಾವ ರೀತಿಯಲ್ಲಿ ಗುದ್ದಿರಬಹುದು ಎಂಬುದು  ಗೊತ್ತಾಗುತ್ತದೆ.

ಮೃತರು ಎಲ್ಲಿಯವರು…?

ಕೆ ಎ 51 ಡಿ 5066 ನಂಬರ್ ನ ಇಂಡಿಕಾ ಕಾರು ಬೆಂಗಳೂರಿನಿಂದ ಹೊರಟು ಹೊಸಪೇಟೆಗೆ ಹೋಗುತಿತ್ತು. ಈ ಕಾರಿನಲ್ಲಿ ಏಳು ಮಂದಿ ಪ್ರಯಾಣಿಸುತ್ತಿದ್ದರು. ಯಾದಗಿರಿ ಜಿಲ್ಲೆಯ ನಾಲ್ವರು, ವಿಜಯಪುರದ ಒಬ್ಬರು ಮತ್ತು

ವಿಜಯಪುರದ ಇಬ್ಬರು

ಯಾದಗಿರಿ ಜಿಲ್ಲೆಯ ಶಹಪೂರದ ಮಲ್ಲನಗೌಡ, ಸಂತೋಷ್, ಸಂಜೀವ್, ಜೈಭೀಮ್, ವಿಜಯಪುರ ಜಿಲ್ಲೆಯ ತಾಳಿಕೋಟೆಯ ರಘು, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿದ್ದೇಶ್, ಕೂಡ್ಲಿಗಿ ತಾಲೂಕಿನ ಇಚಲಬೊಮ್ಮನಹಳ್ಳಿಯ ವೇದಮೂರ್ತಿ ಅಸುನೀಗಿದವರು. ಎಲ್ಲಾ ಮೃತದೇಹಗಳನ್ನು ಜಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಶವಗಳ ಹಸ್ತಾಂತರ ಅವರು ಬಂದ ಮೇಲೆ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button