ರಸ್ತೆ ಅಫಘಾತದಲ್ಲಿ ನನ್ನಮ್ಮ ಸುಪರ್ ಸ್ಟಾರ್ ಸ್ಪರ್ಧಿ 6 ವರ್ಷದ ಸಮನ್ವಿ ನಿಧನ

ಬೆಂಗಳೂರು : ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ನಡೆದ ಸಂಭವಿಸಿದ ಅಪಘಾತದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ಶೋನ ಸ್ಪರ್ಧಿ ಸಮನ್ವಿ (6 ವರ್ಷ) ಮೃತಪಟ್ಟ ಘಟನೆ ಕೋಣನ ಕುಂಟೆ ಬಳಿ ನಡೆದಿದೆ.
ಮಗಳು ಸಮನ್ವಿ ಜೊತೆ ಕಿರುತೆರೆ ನಟಿ ಅಮೃತಾ ನಾಯ್ಡು ಅವರು ಗುರುವಾರ ಸಂಜೆ 4.30ರಲ್ಲಿ ಸ್ಕೂಟರ್ ನಲ್ಲಿ ಮಗಳನ್ನು ಹಿಂದೆ ಕೂರಿಸಿಕೊಂಡು, ವಾಜರಹಳ್ಳಿ ಮೆಟ್ರೋ ನಿಲ್ದಾಣಕ್ಕೆ ತೆರಳುತ್ತಿದ್ದರು. ಮಾರ್ಗಮಧ್ಯೆ ವಾಜರಹಳ್ಳಿ ಮುಖ್ಯರಸ್ತೆಯ ನಿಕೇತ್ ಸೀಸರ್ ಅಪಾರ್ಮೆಂಟ್ ಬಳಿ ವೇಗವಾಗಿ ಬಂದ ಟಿಪ್ಪರ್ ಲಾರಿ, ಓವರ್ ಟೇಕ್ ಮಾಡುವಾಗ ಏಕಾಏಕಿ ಲಾರಿಯ ಎಡಭಾಗ ಸ್ಕೂಟಿಗೆ ತಾಗಿತ್ತು. ಇದರಿಂದಾಗಿ ಸ್ಕೂಟರ್ ಚಲಾಯಿಸುತ್ತಿದ್ದ ಅಮೃತಾ ಹಾಗೂ ಅವರ ಪುತ್ರಿ ಸಮನ್ವಿ ರಸ್ತೆಗೆ ಬಿದ್ದಿದ್ದರು. ಪುತ್ರಿ ಸಮನ್ವಿ ಸಾವನ್ನಪ್ಪಿದ್ದರೇ, ಅಮೃತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿ ಟಿಪ್ಪರ್ ಲಾರಿ ಚಾಲಕನನ್ನು ಕೆ.ಎಸ್.ಲೇಔಟ್ ಸಂಚಾರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಟಾಣಿ ಸಮನ್ವಿ ನಿಧನಕ್ಕೆ ಹಿರುತೆರೆ ಹಾಗೂ ಕಿರುತೆರೆಯ ಅನೇಕ ನಟ, ನಟಿಯರು ಕಂಬನಿ ಮಿಡಿದಿದ್ದಾರೆ.



