ಜಿಲ್ಲಾ ಸುದ್ದಿ
ತನಿಖೆಯ ಹಾದಿ ತಪ್ಪಿಸಲು ಹುನ್ನಾರ: ಶಾಸಕ ಸುರೇಶ್

ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಬೇಕಂತಲೇ ಯಾರೋ ಅಪಪ್ರಚಾರ ಮಾಡಿದ್ದಾರೆ ಎಂದು ತರೀಕೆರೆ ಶಾಸಕ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.
ನನಗೆ ಕಣ್ಣಿನ ಬೇನೆಯಿದ್ದರಿಂದ ನಾನು ಕಣ್ಣಿನ ಡ್ರಾಪ್ಸ್ ಮತ್ತು ಮಾತ್ರೆ ತೆಗೆದುಕೊಂಡು ಕಾರ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಂಬುಲೆನ್ಸ್ನಲ್ಲಿ ಕಳುಹಿಸುವಾಗ ನನ್ನ ಸಿಬ್ಬಂದಿ ಸ್ಪಂದಿಸಿದ್ದಾರೆ. ಯಾವುದೋ ಅಪರಿಚಿತ ವಾಹನದವರು ಢಿಕ್ಕಿ ಹೊಡೆದು ನಂತರ ಅವರೇ ಕೆಳಗಿಳಿದು ವಿಡಿಯೋ ಮಾಡಿ ತನಿಖೆಯ ಹಾದಿ ತಪ್ಪಿಸಲು ಹುನ್ನಾರ ನಡೆಸಿದ್ದಾರೆ. ಇದರ ಸೂಕ್ತ ತನಿಖೆಯಾಗಬೇಕು ಎಂದು ಪೊಲೀಸರಿಗೆ ತಿಳಿಸಿದ್ದೇನೆ ಎಂದಿದ್ದಾರೆ.
ಅಪಘಾತಕ್ಕೀಡಾದ ಆರೋಗ್ಯಾಧಿಕಾರಿ ಯಾವುದೇ ಕೋವಿಡ್ ಕರ್ತವ್ಯಕ್ಕೆ ಹೋಗಿರಲಿಲ್ಲ. ತೋಟದಲ್ಲಿ ಕುಡಿದು ಬಂದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.




