ಜಿಲ್ಲಾ ಸುದ್ದಿರಾಜ್ಯರಾಷ್ಟ್ರೀಯ

ಮೇಕೆದಾಟು: ಎನ್‍ಜಿಟಿಯಿಂದ ಜಂಟಿ ಸಮಿತಿ

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ದಕ್ಷಿಣ ಪೀಠ ಮೇಕೆದಾಟು ಪ್ರದೇಶದಲ್ಲಿ ಅಕ್ರಮ ನಿರ್ಮಾಣ ಕಾರ್ಯಗಳು ನಡೆಯುತ್ತಿವೆಯೇ ಎನ್ನುವುದನ್ನು ಪರಿಶೀಲಿಸಲು ಜಂಟಿ ಸಮಿತಿಯನ್ನು ರಚಿಸಿದೆ. ಜುಲೈ 5ರೊಳಗೆ ವರದಿ ಸಲ್ಲಿಸಬೇಕೆಂದು ನಿರ್ದೇಶಿಸಿದೆ.

ಈ ಕುರಿತು ಮಾಧ್ಯಮದಲ್ಲಿ ವರದಿಯೊಂದು ಪ್ರಕಟವಾಗಿತ್ತು. ಸೋಮೋಟೋ ಪ್ರಕರಣ ದಾಖಲಿಸಿಕೊಂಡಿರುವ ಎನ್‍ಜಿಟಿ, ಪರಿಸರ ಪರಿಣಾಮ ಲೆಕ್ಕಾಚಾರ ನಡೆಸದೆ ಹಾಗೂ ಅಗತ್ಯವಿರುವ ಅನುಮತಿಗಳನ್ನು ಪಡೆಯದೆ, ನಿರ್ಮಾಣ ಕಾರ್ಯಕ್ಕೆ ಮುಂದಾಗುವುದು ಅಕ್ರಮವಾಗಲಿದೆ ಎಂದಿದೆ.

ಕರ್ನಾಟಕ ಸರ್ಕಾರ ಕಾವೇರಿ ನದಿಗೆ ಅಡ್ಡವಾಗಿ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದೆ.

Related Articles

Leave a Reply

Your email address will not be published. Required fields are marked *

Back to top button