ರಾಷ್ಟ್ರೀಯ

ಯಾಸ್ ಅಬ್ಬರದ ನಡುವೆ ಒಂದು ತಮಾಷೆ!

ಇದು ಒಡಿಶಾದಿಂದ ಬಂದ ವರದಿ. ಯಾಸ ಚಂಡಮಾರುತದ ಬಗ್ಗೆ ವರದಿ ಮಾಡಲು ವರದಿಗಾರ್ತಿಯೊಬ್ಬರು ಓಡಾಡುತ್ತಿದ್ದ ಹೊತ್ತಲ್ಲಿ ಹೊರಗಡೆ ಜನರು ಓಡಾಡುತ್ತಿರುವುದನ್ನು ಗಮನಿಸುತ್ತಾರೆ. ಚಂಡಮಾರತುತದ ಬಗ್ಗೆ ಗೊತ್ತಿದ್ದೂ ಜನರು ಹೀಗೆ ಓಡಾಡುತ್ತಿರುವುದನ್ನು ಕಂಡು ಅವರಿಗೆ ಅಚ್ಚರಿ. ಒಬ್ಬನ್ನು ನಿಲ್ಲಿಸಿ ಕೇಳಿಯೇಬಿಡುತ್ತಾರೆ:

“ಚಂಡಮಾರುತವಿದೆ. ಇಂಥ ಹೊತ್ತಲ್ಲಿ ಯಾಕೆ ಹೊರಗಡೆ ಬಂದಿದ್ದೀರಿ?”

“ನೀವೂ ಹೊರಗಡೆ ಬಂದಿದ್ದೀರಲ್ಲ, ನಾನೂ ಬಂದಿದ್ದೀನಿ” ಎಂದು ಉತ್ತರಿಸುತ್ತಾನೆ ಆ ವ್ಯಕ್ತಿ.

“ನಾನು ಬಂದಿರೋದು ವರಿದ ಮಾಡೋಕ್ಕೆ” ಎನ್ನುತ್ತಾರೆ ವರದಿಗಾರ್ತಿ.

ಅದಕ್ಕೆ ಆತ, “ನಾವು ಹೊರಗೆ ಬರದಿದ್ದರೆ ಟೀವಿಯಲ್ಲಿ ನೀವೇನು ತೋರಿಸುತ್ತೀರಿ?” ಎಂದು ಕೆಳುತ್ತಾನೆ.

ಈ ವಿಡಿಯೋ ಕ್ಲಿಪ್ ಇದೀಗ ವೈರಲ್ ಆಗಿದೆ. ಅದನ್ನು ಟ್ವೀಟ್ ಮಾಡಿರುವ ಐಪಿಎಸ್ ಅಧಿಕಾರಿಯೊಬ್ಬರು ಎಂಥ ದಯಾಳು ಮನುಷ್ಯ ಎಂದು ಬರೆದುಕೊಂಡಿದ್ದಾರೆ.

6 ಸಾವಿರ ಮಂದಿ ಲೈಕ್ ಮಾಡಿರುವ ಈ ವಿಡಿಯೋ ಕ್ಲಿಪ್ ನ್ನು 76 ಸಾವಿರ ಮಂದಿ ವೀಕ್ಷಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button