ಶ್ರೀ ಚಾಮುಂಡೇಶ್ವರಿಬಸವಪ್ಪನ ಪುಣ್ಯ ಕ್ಷೇತ್ರದಲ್ಲಿ ಸಾವನ್ನಪ್ಪಿದ್ದ ಪವಾಡ ಬಸವಪ್ಪನ ಗಣಾರಾಧನೆ ; ಸಾವಿರಾರು ಭಕ್ತರ ಆಗಮನ

ರಾಮನಗರ: ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪನ ಪುಣ್ಯ ಕ್ಷೇತ್ರದಲ್ಲಿ ಸಾವನ್ನಪ್ಪಿದ್ದ ಪವಾಡ ಬಸವಪ್ಪನ ಗಣಾರಾಧನೆ ಹಾಗೂ ನೂತನ ಬಸವಪ್ಪನ ಪಟ್ಟಾಭಿಷೇಕ ಕಾರ್ಯಕ್ರಮ ಗುರುವಾರ ನಡೆಯಿತು. ಕ್ಷೇತ್ರದಲ್ಲಿ ನೆಲೆಸಿದ್ದ ಪವಾಡ ಬಸವಪ್ಪ ಕಳೆದ ಮಾ.6 ರಂದು ಸಾವನ್ನಪ್ಪಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಮತ್ತು ಬುಧವಾರದಿಂದಲೇ ಹೋಮ ಹಾಗೂ ಹವನಗಳು ಆರಂಭಗೊಂಡಿದ್ದವು. ಮುಂಜಾನೆಯಿಂದ ಸಂಜೆವರೆಗೂ ಗಣಾರಾಧನೆ ಹಾಗೂ ಶ್ರೀ ಚಾಮುಂಡೇಶ್ವರಿಬಸವಪ್ಪನ ಪುಣ್ಯ ಕ್ಷೇತ್ರದಲ್ಲಿ ಸಾವನ್ನಪ್ಪಿದ್ದ ಪವಾಡ ಬಸವಪ್ಪನ ಗಣಾರಾಧನೆ ನಡೆಯಿತು. ಈ ಸಾಕ್ಷಿಯಾಕಾರ್ಯ ಕ್ರಮಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು.
ಬಸವಪ್ಪ ಶಿವೈಕ್ಯವಾಗಿರುವ ಸ್ಥಳದಲ್ಲಿ ಮಂಟಪ ನಿರ್ಮಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಲಾಯಿತು. ಆಗಮಿಕ ಆರ್ಚಕರಾದ ನಾಗರಾಜು ಸೇರಿದಂತೆ ಹಲವು ಅರ್ಚಕರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಈ ಕಾರ್ಯಕ್ರಮದ ಪ್ರಯುಕ್ತ ಭಕ್ತಾಧಿಗಳಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಹಾಗೂ ಗಣಾರಾಧನೆ ಜೊತೆಗೆ, ಕ್ಷೇತ್ರಪಾಲಕರಾಗಿ ಆಯ್ಕೆಯಾಗಿರುವ ನೂತನ ಬಸವಪ್ಪನಿಗೆ ಪಟ್ಟಾಭಿಷೇಕದ ಕಾರ್ಯಕ್ರಮ ಕೂಡ ಇದೇ ವೇಳೆ ಅದ್ದೂರಿಯಾಗಿ ನೆರವೇರಿತು. ಹಳ್ಳಿಕಾರ್ ತಳಿಗಳ ಒಡೆಯ ಎಂದು ಹೆಸರಾಗಿರುವ ಬೆಂಗಳೂರಿನ ವರ್ತೂರು ಸಂತೋಷ್ ಅವರ ಮನೆಯಿಂದ ತಂದಿರುವ ಹಳ್ಳಿಕಾರ್ ತಳಿಯ ಕರುವನ್ನು ಮುಂದಿನ ಕ್ಷೇತ್ರಪಾಲಕರಾಗಿ ಆಯ್ಕೆ ಮಾಡಲಾಗಿದ್ದು, ಈ ಬಸವಪ್ಪನಿಗೆ ಸಕಲ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಕ್ಷೇತ್ರಪಾಲಕನಾಗಿ ಪಟ್ಟಾಭಿಷೇಕ ಕಟ್ಟುವ ಕಾರ್ಯಕ್ರಮ ವೈಭವವಾಗಿ ಜರುಗಿತು.
ಹಾಗೂ ಶಿವೈಕ್ಯ ಬಸವಪ್ಪನ ಮಂಟಪದ ಮುಂಭಾಗ ನೂತನ ಬಸವಪ್ಪನಿಗೆ ಕ್ಷೀರ, ಅರಿಶಿನ, ಕುಂಕುಮ, ಗಂಧ, ಪುಷ್ಪಾ, ವಿಭೂತಿ ಸೇರಿದಂತೆ ಹಲವು ಅಭಿಷೇಕಗಳನ್ನು ನಡೆಸಲಾಯಿತು. ಈ ಬಸವಪ್ಪನಿಗೆ ಪುಷ್ಪ ಮುದ್ರೆ ಹಾಕಿ, ಬೆಳ್ಳಿ ಆಭರಣಗಳಿಂದ ಆಲಂಕಾರ ಮಾಡಿ ದೇವಾಲಯದ ಸುತ್ತ ಮೆರವಣಿಗೆ ಮಾಡಲಾಯಿತು.ನೂತನ ಬಸವಣ್ಣನ ದೇವಾಲಯದ ಸುತ್ತ ಒಂದು ಸುತ್ತು ಹಾಕಿ ದೇವಾಲಯದ ಗರ್ಭಗುಡಿಗೆ ಹೋಗಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಿತು. ನಂತರ ಗ್ರಾಮದ ಹೆಬ್ಬಾಗಿಲವರೆಗೂ ಸ್ವತಃ ತಾನೇ ಸುತ್ತು ಹಾಕಿದ್ದು ವಿಶೇಷವಾಗಿತ್ತು. ಈ ಹಿಂದಿನ ಬಸವಣ್ಣ ಓಡಾಡುತ್ತಿದ್ದ ಸ್ಥಳಗಳಲ್ಲಿ ತಾನೇ ಹೋಗಿ ಸುತ್ತು ಹಾಕಿ ಬಂದಿದ್ದು ಭಕ್ತರ ಹಷ್ಕೋದ್ಘಾರಕ್ಕೆ ಕಾರಣವಾಯಿತು.ತನ್ನ ಪವಾಡಗಳಿಂದಲೇ ರಾಜ್ಯದಲ್ಲಷ್ಟೇ ಅಲ್ಲದೇ ಹೊರ ರಾಜ್ಯಗಳಲ್ಲೂ ಹೆಸರುಗಳಿಸಿದ ಕ್ಷೇತ್ರಪಾಲಕರಾಗಿದ್ದ ಶಿವೈಕ್ಯ ಬಸವಪ್ಪನ ಗಣಾರಾಧನೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಿದ್ದೇವೆ,ಲಕ್ಷಾಂತರ ಮಂದಿಗೆ ಬೆಳಕಾಗಿದ್ದ ಹಾಗೂ ಕ್ಷೇತ್ರದಲ್ಲಿ ವಿಶ್ವದ ಅತಿ ಎತ್ತರದ ಚಾಮುಂಡೇಶ್ವರಿ ಮೂರ್ತಿ ಸ್ಥಾಪನೆ ನೀಡಲು ಪ್ರಮುಖ ಕಾರಣರಾಗಿದ್ದ ಅವರ ಆಗಲಿಕೆಯ ನೋವು ಎಂದಿಗೂ ಮರೆಯಾಗುವುದಿಲ್ಲ. ಶಿವೈಕ್ಯರಾದ ಬಸವಪ್ಪನವರ ಗದ್ದಿಗೆಯ ಮುಂಭಾಗ ಕ್ಷೇತ್ರಪಾಲಕರಾಗಿ ಆಯ್ಕೆಯಾಗಿರುವ ನೂತನ ಬಸವಪ್ಪನವರಿಗೆ ಹೂಮುದ್ರೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮುದ್ರಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಧರ್ಮದರ್ಶಿ ಡಾ. ಮಲ್ಲೇಶ್ ಗೂರೂಜೀ ತಿಳಿಸಿದರು.




