Breaking NewsLatestಮನರಂಜನೆಸಿನಿಮಾಸ್ಯಾಂಡಲ್ ವುಡ್
ಕೆಜಿಎಫ್ ದಾಖಲೆ ಬ್ರೇಕ್ ಮಾಡಿದ ಜೇಮ್ಸ್; ಬಾಕ್ಸ್ ಆಫೀಸ್ ನಲ್ಲಿ ಧೂಳ್

‘ಪವರ್ ಸ್ಟಾರ್’ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ‘ಜೇಮ್ಸ್’ ನಿನ್ನೆ ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಸಖತ್ ಅದ್ದೂರಿಯಾಗಿ ರಿಲೀಸ್ ಆಗಿದೆ. ಮೊದಲ ದಿನವೇ ಚಿತ್ರಮಂದಿರಗಳು ಅಭಿಮಾನಿಗಳಿಂದ ತುಂಬಿ ತುಳುಕಿದ್ದು ಸಿನಿ ಪಂಡಿತರು ಕಲೆಕ್ಷನ್ ಕುರಿತಾಗಿ ಮಾತನಾಡುತ್ತಿದ್ದಾರೆ. ಇದೀಗ ಜೇಮ್ಸ್ ಚಿತ್ರತಂಡದ ಕಡೆಯಿಂದ ಮಾಹಿತಿಯೊಂದು ಸಿಕ್ಕಿದ್ದು ಜೇಮ್ಸ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಎಂಬುದನ್ನ ಹೇಳಿದ್ದಾರೆ.
ಮೂಲಗಳ ಪ್ರಕಾರ ಜೇಮ್ಸ್ ಮೊದಲ ದಿನ 30 ಕೋಟಿಗಿಂತಲೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಈ ಮೂಲಕ ಯಶ್ ನಟನೆಯ ಕೆಜಿಎಫ್ ಚಿತ್ರದ ದಾಖಲೆಯನ್ನ ಪುನೀತ್ ಸಿನಿಮಾ ಬ್ರೇಕ್ ಮಾಡಿದೆ.
ಪುನೀತ್ ನಟನೆಯ ಕೊನೆಯ ಸಿನಿಮಾ ಅನ್ನೋ ಕಾರಣಕ್ಕೆ ಈ ಚಿತ್ರವನ್ನ ಅಭಿಮಾನಿಗಳು ಮುಗಿ ಬಿದ್ದು ನೋಡಿದ್ದಾರೆ. ಚಿತ್ರದ ಯಶಸ್ಸು ಕಂಡು ಚಿತ್ರತಂಡ ಹಾಗೂ ಅಪ್ಪು ಅಭಿಮಾನಿಗಳು ಖುಷಿಯಾಗಿದ್ದಾರೆ. ಆದರೆ ಈ ಖುಷಿಯಲ್ಲಿ ಸೆಲೆಬ್ರೇಟ್ ಮಾಡಲು ಅಪ್ಪು ನಮ್ಮೊಂದಿಗಿಲ್ಲ ಅನ್ನೋ ನೋವು ಕಾಡ್ತಿದೆ.
