ಶಿವಮೊಗ್ಗ

ಈಶ್ವರಪ್ಪರಿಗೆ ಡಿಸಿಎಂ ಸ್ಥಾನ ನೀಡಿ; ಅಭಿಮಾನಿಗಳ ಒತ್ತಾಯ

ಶಿವಮೊಗ್ಗ: ಮಾಜಿ ಸಚಿವ ಕೆ.‌ ಎಸ್. ಈಶ್ವರಪ್ಪ ಅವರಿಗೆ ಡಿಸಿಎಂ ಸ್ಥಾನ ನೀಡುವಂತೆ ಕೆ. ಎಸ್. ಈಶ್ವರಪ್ಪ ಅಭಿಮಾನಿಗಳ ಬಳಗ ಆಗ್ರಹಿಸಿದೆ.

ಭಾರತೀಯ ಜನತಾ ಪಾರ್ಟಿಯಲ್ಲಿ ಯಡಿಯೂರಪ್ಪರ ಜೊತೆಯಲ್ಲಿ ತಳ ಮಟ್ಟದಿಂದ ಸಂಘಟನೆ‌ ಮಾಡಿರುವ ಹಿರಿಯ ನಾಯಕ ಈಶ್ವರಪ್ಪ. ಬಿಜೆಪಿ ರಾಜ್ಯಾಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ, ಸಚಿವರಾಗಿ ಹಾಗೂ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿ ಜನರ ಪರ ಕೆಲಸ ಮಾಡಿರುವ ನಾಯಕ.

ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ಶಿವಮೊಗ್ಗ ಜನತೆಗೆ ತುಂಬಾ ಸಹಾಯ ಮಾಡಿದ್ದಾರೆ. ಆರೋಗ್ಯ ಕಿಟ್, ಆಹಾರ ಕಿಟ್ ನೀಡುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಿದ ನಾಯಕ. ಸಿಎಂ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಡಿಸಿಎಂ ಸ್ಥಾನವನ್ನು ಈಶ್ವರಪ್ಪ ಅವರಿಗೆ ನೀಡಲೇಬೇಕೆಂದು ಬಳಗದ ಅಧ್ಯಕ್ಷ ಎ. ಎನ್. ಸಂತೋಷ್, ಉಪಾಧ್ಯಕ್ಷ ಅರುಣ್ ಹಾಗೂ ಪ್ರಧಾನ ಕಾರ್ಯದರ್ಶಿ ಅವಿನಾಶ್ ಎಲ್. ರಾಜು ಆಗ್ರಹಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button