ಉಡುಪಿ

ಹಾಲಾಡಿಗೆ ಸಚಿವ ಸ್ಥಾನಕ್ಕೆ ಒತ್ತಾಯ; ಬಿಎಸ್​ವೈಗೆ ಹಾಲಾಡಿ ಅಭಿಮಾನಿಗಳಿಂದ ನೇರ ಪತ್ರ

ಉಡುಪಿ: ಇನ್ನೆರಡು ದಿನಗಳಲ್ಲಿ ಸಿಎಂ ಬೊಮ್ಮಾಯಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಗುರುವಾರ ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ಮಾಹಿತಿಯಿದೆ. ಈ ನಡುವೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಮಂತ್ರಿಸ್ಥಾನ ಕೊಡಬೇಕು ಎಂಬ ಕೂಗು ಜೋರಾಗಿದೆ. ಹಾಲಾಡಿ ಅಭಿಮಾನಿಗಳು ಯಡಿಯೂರಪ್ಪನವರಿಗೆ ನೇರ ಪತ್ರ ಬರೆದಿದ್ದಾರೆ.

ನಾನು ಬೆಂಗಳೂರಿಗೆ ಹೋಗಿ ದುಂಬಾಲು ಬಿದ್ದು ಮಂತ್ರಿಸ್ಥಾನವನ್ನು ಕೇಳುವುದಿಲ್ಲ, ನನ್ನ ಉಸಿರು ಇದ್ದರೆ ನಾನು ಕಾಡಿಬೇಡಿ ಮಂತ್ರಿಯಾಗುವುದಿಲ್ಲ ಎಂದು ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸ್ಪಷ್ಟಪಡಿಸಿದ್ದರು. ಆದರೂ ಹಾಲಾಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಪತ್ರ ಅಭಿಯಾನ ನಡೆಸುತ್ತಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ಹಳೆಯ ಎಲ್ಲಾ ನೆನಪುಗಳನ್ನು ಕೆದಕಿದ್ದಾರೆ. ಬೆಂಗಳೂರಿಗೆ ಕರೆಸಿ ಮಂತ್ರಿ ಸ್ಥಾನ ತಪ್ಪಿದಾಗ ಯಡಿಯೂರಪ್ಪ ಮಾತುಕತೆ ಮಾಡಿ ಸಿಹಿಸುದ್ದಿ ಕೊಡುವುದಾಗಿ ಹೇಳಿದ್ದರು. ಅದನ್ನು ಯಾಕೆ ಮರೆತಿದ್ದೀರಿ? ನೀವು ಕಿಂಗ್ ಮೇಕರ್ ಸದಾನಂದಗೌಡ ಶೆಟ್ಟರ್ ಬೊಮ್ಮಯನ್ನು ಸಿಎಂ ಮಾಡಿದ್ದೀರಿ. ಹಾಲಾಡಿಯನ್ನು ಮಂತ್ರಿ ಮಾಡಬೇಕೆಂದು ಅನ್ನಿಸಲಿಲ್ಲವಾ? ಕೋಟಾ ಶ್ರೀನಿವಾಸ ಪೂಜಾರಿಗೆ ಸ್ಥಾನ ಕೊಟ್ಟದ್ದು ಯಾಕೆ ಎಂಬುದನ್ನು ನಾವು ಇನ್ನೂ ಮರೆತಿಲ್ಲ. ಶೋಭಾ ಕರಂದ್ಲಾಜೆಗೆ ಹಾಲಾಡಿ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ಕೊಡಿಸಿದ್ದು ನಿಮಗೆ ಮರೆತುಹೋಯಿತೆ? ಹಾಲಾಡಿ ಜಿಲ್ಲೆಯ ಏಕೈಕ ಶಾಸಕರಾಗಿದ್ದ ದಿನಗಳನ್ನು ನೀವು ಮರೆಯಬೇಡಿ. ಪಕ್ಷೇತರರಾಗಿದ್ದಾಗ ನಿರ್ಮಲಾ ಸೀತಾರಾಮನ್ ಗೆ ಮತ ಹಾಕಿದ್ದು ನಿಮಗೆ ನೆನಪಿಲ್ಲವೇ? ಹಾಲಾಡಿಗೆ ಸಚಿವ ಸ್ಥಾನ ಸಿಗದಿದ್ದರೆ ನಮಗೆ ಬೇಸರವಿಲ್ಲ , ಆದರೆ ಲಕ್ಷಾಂತರ ಮಂದಿಯ ಶಾಪ ನಿಮಗೆ ತಟ್ಟಲಿದೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಕಡೆ ಓಡಾಡುತ್ತಿದೆ. ಕೆಲ ಅಭಿಮಾನಿಗಳು ಪ್ರಿಂಟ್ ತೆಗೆದು ಯಡಿಯೂರಪ್ಪನವರಿಗೆ ಪೋಸ್ಟ್ ಮಾಡುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button