ರಾಮನಗರ

‘ಮಂಟೆಸ್ವಾಮಿ ಕಥಾ ಪ್ರಸಂಗ’ ನಾಟಕ ಪ್ರದರ್ಶನ

ರಾಮನಗರ : ರಾಮನಗರ ಜಿಲ್ಲಾ ಕೇಂದ್ರವಾಗಿದ್ದು, ನಾಟಕಗಳನ್ನು ವ್ಯವಸ್ಥಿತವಾಗಿ ಪ್ರದರ್ಶಿಸಲು ಸೂಕ್ತ ಭವನಗಳು ಇಲ್ಲದಿರುವುದು ಬೇಸರದ ಸಂಗತಿಯಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಯೋಗ ಕೇಂದ್ರದ ಮುಖ್ಯಸ್ಥ ಡಾ.ಕೆ. ರಾಮಕೃಷ್ಣಯ್ಯ ತಿಳಿಸಿದರು.

ರಾವಣಾಸುರ ಯುವ ಸಾಮಾಜಿಕ ಮತ್ತು ಸಾಂಸ್ಕøತಿಕ ಟ್ರಸ್ಟ್ ಇಲ್ಲಿನ ಜಾನಪದ ಲೋಕದಲ್ಲಿ ಸಾಹಿತಿ ಡಾ.ಎಚ್.ಎಸ್. ಶಿವಪ್ರಕಾಶ್ ರಚಿಸಿರುವ, ಡಾ.ಕೆ. ರಾಮಕೃಷ್ಣಯ್ಯ ನಿರ್ದೇಶಿಸಿರುವ ‘ಮಂಟೆಸ್ವಾಮಿ ಕಥಾ ಪ್ರಸಂಗ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಭಾಗದ ಚುನಾಯಿತ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಜಿಲ್ಲಾ ಕೇಂದ್ರದಲ್ಲಿ ಸಾಮಾಜಿಕ, ಪೌರಾಣಿಕ ಸೇರಿದಂತೆ ಇತರೆ ನಾಟಕಗಳನ್ನು ಪ್ರದರ್ಶಿಸಲು ಭವನವನ್ನು ನಿರ್ಮಿಸಬೇಕು. ಇದರಿಂದ ಸಾಂಸ್ಕøತಿಕ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕಲಾಮೈತ್ರಿ ತಂಡದವರು ‘ಮಂಟೆಸ್ವಾಮಿ ಕಥಾ ಪ್ರಸಂಗ’ವನ್ನು ಪ್ರದರ್ಶಿಸಿದರು. ರಾವಣಾಸುರ ಯುವ ಸಾಮಾಜಿಕ ಮತ್ತು ಸಾಂಸ್ಕøತಿಕ ಟ್ರಸ್ಟಸಿನ ಅಧ್ಯಕ್ಷೆ ಎನ್. ಸುಗುಣ, ವಕೀಲ ಎಸ್. ಕಾಂತರಾಜು, ಸಂಘಟಕ ಕುಂಬಾಪುರ ಬಾಬು, ಜಾನಪದ ಲೋಕದ ಕ್ಯುರೇಟರ್ ಡಾ.ಯು.ಎಂ. ರವಿ, ರಂಗ ನಿರ್ದೇಶಕ ಎಸ್. ಪ್ರದೀಪ್, ಗಾಯಕ ಡಾ. ಬ್ಯಾಡರಹಳ್ಳಿ ಶಿವಕುಮಾರ್, ಚಂದ್ರು ಸಾಖ್ಯವಂಶಿ, ರಾಣಿಕಿರಣ್, ಉಪನ್ಯಾಸಕ ಕುಮಾರಸ್ವಾಮಿ, ಕೆಜಿಎಫ್ ಸಂಪತ್ ಕುಮಾರ್ ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button