ಜಿಲ್ಲಾ ಸುದ್ದಿ

ಬೂದಿಗೆರೆಯಲ್ಲಿ ಅನ್ನದಾಸೋಹ; ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸಿ ಶ್ರೀನಿವಾಸ್ ಚಾಲನೆ

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕು ಬೂದಿಗೆರೆಯಲ್ಲಿ ಕೋವಿಡ್ ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ಬಡವರಿಗೆ, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸಿ ಶ್ರೀನಿವಾಸ್ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದಿನಸಿ ಕಿಟ್ ಮತ್ತಿತರ ಅಗತ್ಯ ವಸ್ತುಗಳನ್ನು ಮಂಗಳವಾರ ವಿತರಿಸಿದರು.

ಬೂದಿಗೆರೆ ವಿಎಸ್ಎಸ್ಎನ್ ಮಾಜಿ ಅಧ್ಯಕ್ಷರಾದ ಹಿತ್ತರಹಳ್ಳಿ ರಮೇಶ್ ಅವರ ಹುಟ್ಟು ಹಬ್ಬದ ಅಂಗವಾಗಿ ಬೂದಿಗೆರೆ ಬಳಿ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಹಸಿದವರಿಗೆ ಊಟದ ವ್ಯವಸ್ಥೆ ಮತ್ತು ಪ್ರತಿ ದಿನ ಒಂದು ಸಾವಿರ ಬಡಜನಗಳಿಗೆ ಊಟಧ ವ್ಯವಸ್ಥೆ, ದಿನಸಿ ಕಿಟ್ ಮತ್ತು ಸರ್ಕಾರಿ ಆಸ್ಪತ್ರೆಯ ಸಿಬ್ಬಂಧಿಗಳಿಗೆ, ಕರೋನಾ ವಾರಿಯರ್ಸ್ ಗಳಿಗೆ, ಆಶಾ ಕಾರ್ಯಕರ್ತರುಗಳಿಗೆ, ಆಹಾರ ದಿನಸಿ ಕಿಟ್, ಸ್ಯಾನಿಟೈಜರ್, ಹಾಗೂ ಆರೋಗ್ಯ ಕಿಟ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಹಿತ್ತರ ಹಳ್ಳಿ ರಮೇಶ್, ಲಕ್ಷ್ಮಣ್ ಗೌಡ, ಶ್ರೀನಿವಾಸ್ ಗೌಡ, ಚೌಡಪ್ಪನಹಳ್ಳಿ ಲೋಕೇಶ್, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆ ಯರು ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button