ರಾಷ್ಟ್ರೀಯ

ಮೃತದೇಹಗಳನ್ನು ಕಿತ್ತು ತಿನ್ನುತ್ತಿರುವ ಬೀದಿನಾಯಿಗಳು!

ಮನುಷ್ಯನ ಮೃತದೇಹವನ್ನು ಬೀದಿನಾಯಿಗಳು ಕಿತ್ತು ತಿನ್ನುತ್ತಿರುವ ಭೀಕರ ದೃಶ್ಯಗಳು ಉತ್ತರಾಖಂಡದ ಉತ್ತರಕಾಶಿ ಭಾಗೀರಥಿ ನದಿ ಸಮೀಪದ ಕೇದಾರ ಘಾಟ್ನಲ್ಲಿ ಕಂಡುಬಂದಿರುವುದು ವರದಿಯಾಗಿದೆ.

ಈ ಬಗ್ಗೆ ಅಲ್ಲಿನ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳಿಂದ ಭಾರೀ ಮಳೆಯಾಗಿದ್ದರಿಂದ ನದಿನೀರಿನ ಮಟ್ಟ ಏರಿಕೆಯಾಗಿ ಎಲ್ಲಿಂದಲೋ ಶವಗಳು, ಕೆಲವು ಸುಟ್ಟ ಶವಗಳು ತೇಲಿಬಂದಿವೆ ಎನ್ನಲಾಗಿದೆ.

ಕೆಲದಿನಗಳ ಹಿಂದೆ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಗಂಗಾನದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶವಗಳು ತೇಲುತ್ತಿರುವ ಬಗ್ಗೆ ಘಟನೆಗಳು ವರದಿಯಾಗಿದ್ದವು.

Spread the love

Related Articles

Leave a Reply

Your email address will not be published. Required fields are marked *

Back to top button