ರಾಮನಗರ
ವಿದ್ಯುತ್ ಸ್ಪರ್ಶ; ರೈತ ಸಾವು

ರಾಮನಗರ: ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದಲ್ಲಿ ಮನೆಮುಂದಿದ್ದ ವಿದ್ಯುತ್ ಕಂಬದಲ್ಲಿ ಬೀದಿ ದೀಪದ ಲೈಟ್ ಹಾಕಲು ಅಳವಡಿಸಿದ್ದ ಸ್ವೀಚ್ ವೈರ್ ನಿಂದ ವಿದ್ಯುತ್ ಪ್ರವಹಿಸಿ ರೈತರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ದೊಡ್ಡಾಲಹಳ್ಳಿ ಗ್ರಾಮದ ಪುಟ್ಟಸ್ವಾಮಿಗೌಡ ಮೃತ ರೈತ. ರೇಷ್ಮೆ ಸೊಪ್ಪು ಕಟಾವು ಮಾಡಿಕೊಂಡು ಬಂದು ಮನೆಯ ಮುಂಭಾಗ ಹಾಕಲು ಹೋದಾಗ ಬೀದಿ ದೀಪದ ಸ್ವೀಚ್ ವೈರ್ ಗೆ ತಾಕಿ ಈ ಅವಘಡ ಸಂಭವಿಸಿದೆ.
ಘಟನೆ ಸಂಬಂಧ ಪುಟ್ಟಸ್ವಾಮಿಗೌಡರ ಪುತ್ರ ಸಾತನೂರು ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾ.ಪಂ. ಮತ್ತು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಈ ಅವಘಡ ಸಂಬಂಧಿಸಿದೆ ಎಂದು ದೂರಿದ್ದಾರೆ.
ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ಒಪ್ಪಿಸಲಾಗಿದೆ.




