ಬಿಡದಿ ಪುರಸಭೆಗೆ ಈವರೆಗೆ 50 ನಾಮಪತ್ರ ಸಲ್ಲಿಕೆ: ಇಂದು ಕೊನೇ ದಿನ

ರಾಮನಗರ : ಬಿಡದಿ ಪುರಸಭೆ ಚುನಾವಣೆಗೆ ಮಂಗಳವಾರ 14 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಒಟ್ಟು ನಾಮಪತ್ರಗಳ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ.
ಡಿ.8ರಿಂದ 12ರವರೆಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಡಿ.13ರಂದು 36 ನಾಮಪತ್ರಗಳು ಹಾಗೂ ಡಿ.14ರಂದು 14 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಡಿ.15 (ಇಂದು) ಕಡೆಯ ದಿನವಾಗಿದ್ದು, ನೂಕುನುಗ್ಗಲು ಉಂಟಾಗುವ ಸಂಭವವಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ತಲಾ 4, ಬಿಜೆಪಿಯಿಂದ 5, ಆಮ್ ಆದ್ಮಿ ಪಾರ್ಟಿಯಿಂದಒಬ್ಬರು ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ನಿನ್ನೆ ಮಂಗಳವಾರವಾದ ಕಾರಣ ನಾಮಪತ್ರ ಸಲ್ಲಿಸುವವರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು.
3ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿಯಾಗಿ ಕವಿತಾ ಕುಮಾರ್, 15ನೇ ವಾರ್ಡ್ನಿಂದ ರೇಣುಕಯ್ಯ, 23ನೇ ವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ನಾಗರಾಜು ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಅಭ್ಯರ್ಥಿಗಳಿಗೆ ತಾಪಂ ಮಾಜಿ ಅಧ್ಯಕ್ಷೆಹಾಗೂ ಶಾಸಕ ಎ.ಮಂಜುನಾಥ್ ಅವರ ಪತ್ನಿ ಲಕ್ಷ್ಮಿ ಮಂಜುನಾಥ್ಸಾತ್ ನೀಡಿದರು.
8ನೇ ವಾರ್ಡ್ನಿಂದ ಬಿ.ಎನ್.ಪ್ರಸನ್ನಕುಮಾರ್, 10ನೇ ವಾರ್ಡ್ನಿಂದ ಪೊಲೀಸ್ ರೇವಣ್ಣ, 11ನೇ ವಾರ್ಡ್ನಿಂದ ಲೋಕೇಶ್, 12ನೇ ವಾರ್ಡ್ನಿಂದ ಶಿವಣ್ಣ, 23ನೇ ವಾರ್ಡ್ನಿಂದ ವಿಷ್ಣು ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರಸಲ್ಲಿಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಅಧ್ಯಕ್ಷ ಧನಂಜಯ,ಜಿಲ್ಲಾ ಉಪಾಧ್ಯಕ್ಷ ಶಿವಲಿಂಗಯ್ಯ, ಬಿಡದಿ ಹೋಬಳಿ ಅಧ್ಯಕ್ಷ ಎಸ್. ರವಿ, ಮುಖಂಡರಾದ ಡಿ.ನರೇಂದ್ರ, ಹನುಮೇಶ್ ಮತ್ತಿತರರು ಇದ್ದರು.




