ಚಿಕ್ಕಮಗಳೂರು

ಪ್ರತಿಸ್ಪರ್ಧಿಗಳ ತಂತ್ರಕ್ಕೆ ಪ್ರತಿತಂತ್ರವೇ ಗೆಲುವಿನ ರಹಸ್ಯ: ಎಂ ಕೆ ಪ್ರಾಣೇಶ್

ಚಿಕ್ಕಮಗಳೂರು: ಪ್ರತಿಸ್ಪರ್ಧಿಗಳ ತಂತ್ರಕ್ಕೆ ಪ್ರತಿತಂತ್ರವೇ ಗೆಲುವಿನ ರಹಸ್ಯವಾಗಿದೆ ಎಂದು ವಿಧಾನ ಪರಿಷತ್ಗೆ ಎರಡನೇ ಬಾರಿಗೆ ಆಯ್ಕೆಯಾಗಿರುವ ಎಂ ಕೆ ಪ್ರಾಣೇಶ್ ಅಭಿಪ್ರಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಆಡಳಿತ ಪಕ್ಷದವರನ್ನು ಒಟ್ಟಾಗಿ ಸೋಲಿಸುವ ಪ್ರಯತ್ನ ನಡೆಯಿತು. ಅದನ್ನು ಮೀರಿ ಗೆಲುವು ಸಾಧಿಸಿದ್ದೇನೆ. 1437 ಸದಸ್ಯರು ಬಿಜೆಪಿ ಜತೆ ಗುರುತಿಸಿಕೊಂಡಿದ್ದು ಗೆಲುವಿನ ಸಹಜ ವಿಶ್ವಾಸವಿತ್ತು. ಆದರೂ ಹಣದ ಆಮಿಷಕ್ಕೆ ಕೆಲವರು ವಿಚಲಿತರಾಗಿದ್ದಾರೆ. ಜೊಳ್ಳು ಹೋಗಿ ಗಟ್ಟಿ ನಿಂತಿದೆ. ಅಂತರದ ವಿಚಾರ ಮುಖ್ಯವಲ್ಲ. ಎಲ್ಲ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಿದ ಫಲ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button